Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: 23 ಗಂಟೆಯಲ್ಲಿ ಮುಗಿದು ದಾಖಲೆ ನಿರ್ಮಿಸಿದ ವಾಮಂಜೂರು ಕಂಬಳ
    ಇತ್ತೀಚಿನ ಸುದ್ದಿ

    ಮಂಗಳೂರು: 23 ಗಂಟೆಯಲ್ಲಿ ಮುಗಿದು ದಾಖಲೆ ನಿರ್ಮಿಸಿದ ವಾಮಂಜೂರು ಕಂಬಳ

    February 18, 2024
    Share

    ಮಂಗಳೂರು: ವಾಮಂಜೂರು ಅಮೃತೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ನಡೆದ ಸಂಕುಪೂಂಜ- ದೇವುಪೂಂಜ ಜೋಡುಕರೆ ಕಂಬಳವು ಈ ಬಾರಿಯ ಕಂಬಳ ಕೂಟದಲ್ಲಿಯೇ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿಯುವ ಮೂಲಕ ದಾಖಲೆ ನಿರ್ಮಿಸಿದೆ .

    ಶನಿವಾರ ಬೆಳಗ್ಗೆ 9.45 ಸುಮಾರಿಗೆ ಆರಂಭವಾಗಿದ್ದ 166 ಜತೆ ಕೋಣಗಳು ಭಾಗವಹಿಸಿದ್ದ ವಾಮಂಜೂರು ಕಂಬಳದ ಅಂತಿಮ ಹಂತದ ಸ್ಪರ್ಧೆಯು ರವಿವಾರ ಬೆಳಗ್ಗೆ 8.50ಕ್ಕೆ ಮುಕ್ತಾಯವಾಗಿದೆ.ಕಳೆದ ವರ್ಷವು 23 ಗಂಟೆಯೊಳಗೆ ಮುಗಿದಿದ್ದ ವಾಮಂಜೂರು ತಿರುವೈಲುಗುತ್ತು ಕಂಬಳವು ಈ ಬಾರಿಯೂ 23 ಗಂಟೆಯೊಳಗೆ ಸಂಪನ್ನವಾಗಿ ಮಾದರಿಯಾಗಿದೆ. ಕಂಬಳವನ್ನು ಸರಿಯಾದ ಸಮಯದಲ್ಲಿ ಮುಗಿಸಲು ಹೊಸ ಹೊಸ ತಂತ್ರಜ್ಞಾನದ ಮೊರೆ ಹೋಗುತ್ತಿರುವ ಸಂದರ್ಭದಲ್ಲಿ ವಾಮಂಜೂರು ಕಂಬಳವು ಇತರ ಕೂಟಗಳಿಗೆ ಮಾದರಿಯಾಗಿದೆ.ಕನೆಹಲಗೆ ವಿಭಾಗದಲ್ಲಿ ಆರು ಜೊತೆ, ಅಡ್ಡಹಲಗೆ ವಿಭಾಗದಲ್ಲಿ ಐದು ಜೊತೆ, ಹಗ್ಗ ಹಿರಿಯ ವಿಭಾಗದಲ್ಲಿ 14 ಜೊತೆ, ನೇಗಿಲು ಹಿರಿಯ ವಿಭಾಗದಲ್ಲಿ 35 ಜೊತೆ, ಹಗ್ಗ ಕಿರಿಯ ವಿಭಾಗದಲ್ಲಿ 23 ಜೊತೆ ಮತ್ತು ನೇಗಿಲು ಕಿರಿಯ ವಿಭಾಗದಲ್ಲಿ 83 ಜೊತೆ ಕೋಣಗಳು ಭಾಗವಹಿಸಿದ್ದವು.ವಾಮಂಜೂರು ತಿರುವೈಲುಗುತ್ತು ಕಂಬಳ ಫಲಿತಾಂಶ ಹೀಗಿದೆ:
    ಕನೆಹಲಗೆ ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ ಪೂಜಾರಿ ಪ್ರಥಮ ಬಹುಮಾನ ಪಡೆದರು. ಬೈಂದೂರು ಮಹೇಶ್ ಪೂಜಾರಿ ಹಲಗೆ ಸ್ಪರ್ಶ ಮಾಡಿದರು. ದ್ವಿತೀಯ ಬಹುಮಾನವನ್ನು ವಾಮಂಜೂರು ತಿರುವೈಲ್ಗುತ್ತು ನವೀನಚಂದ್ರ ಆಳ್ವ ಬಿ, ತೆಕ್ಕಟ್ಟೆ ಸುಧೀರ್ ದೇವಾಡಿಗ ಹಲಗೆ ಸ್ಪರ್ಶಿಸಿದರು.ಅಡ್ಡಹಲಗೆ ವಿಭಾಗದಲ್ಲಿ ಬೋಳಾರ್ ತ್ರಿಶಾಲ್ ಕೆ ಪೂಜಾರಿ ಪ್ರಥಮ ಸ್ಥಾನ ಪಡೆದರು. ಸವ್ಯ ಗಂಗಯ್ಯ ಪೂಜಾರಿ ಹಲಗೆ ಸ್ಪರ್ಶ ಮಾಡಿದರು. ದ್ವಿತೀಯ ಸ್ಥಾನವನ್ನು ನಾರಾವಿ ಯುವರಾಜ್ ಜೈನ್ ಪಡೆದರು. ಹಲಗೆಯನ್ನು ಭಟ್ಕಳ ಹರೀಶ್ ಸ್ಪರ್ಶಿಸಿದರು.ಹಗ್ಗ ಹಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ನಂದಳಿಕೆ ಶ್ರೀಕಾಂತ್ ಭಟ್ ಎ.ಜಾಕಿ ಕಾವೂರು ದೋಟ ಸುದರ್ಶನ್ ಪಡೆದರು. ದ್ವಿತೀಯ ಸ್ಥಾನವನ್ನು ಹರೇಕಳ ಕೈದೇಲುಗುತ್ತು ಮಿಥುನ್ ಎಂ ರೈ ಎ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಜಾಕಿ.ಹಗ್ಗ ಕಿರಿಯ ವಿಭಾಗದಲ್ಲಿ ಕಾರ್ಕಳ ನೆಕ್ಲಾಜೆ ಗುತ್ತು ಪ್ರವೀಣ್ ಪ್ರದೀಪ್ ಕೋಟ್ಯಾನ್ ಎ. ಬೈಂದೂರು ಮಂಜುನಾಥ ಗೌಡ ಪ್ರಥಮ ಬಹುಮಾನ ಪಡೆದರು. ದ್ವಿತೀಯ ಸ್ಥಾನವನ್ನು ಕಾರ್ಕಳ ನೆಕ್ಲಾಜೆ ಗುತ್ತು ಪ್ರವೀಣ್ ಪ್ರದೀಪ್ ಕೋಟ್ಯಾನ್ ಬಿ. ಮಂಗಲ್ಪಾಡಿ ರಕ್ಷಿತ್ ಶೆಟ್ಟಿ ಜಾಕಿಯಾಗಿದ್ದರು.ನೇಗಿಲು ಹಿರಿಯ ವಿಭಾಗದಲ್ಲಿ ಮಿಜಾರು ಬರ್ಕೆ ಪ್ರವೀಣ್ ಭಂಡಾರಿ ಪ್ರಥಮ ಸ್ಥಾನ ಪಡೆದರು. ಕಕ್ಕೆಪದವು ಪೆರ್ಂಗಾಲು ಕೃತಿಕ್ ಗೌಡ ಜಾಕಿಯಾಗಿದ್ದರು. ದ್ವಿತೀಯ ಸ್ಥಾನವನ್ನು ನಾವುಂದ ಆಶ್ರಿತಾ ಇಶಾನಿ ವಿಶ್ವನಾಥ ಪೂಜಾರಿ ಎ. ಜಾಕಿ ಬೈಂದೂರು ಮಂಜುನಾಥ ಗೌಡ ಪಡೆದರು.ನೇಗಿಲು ಕಿರಿಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ವಾಮಂಜೂರು ತಿರುವೈಲು ಮಜಲುಮನೆ ಸಂಜೀವ ಮೂಲ್ಯ ಎ. ಹೀರೆಬೆಟ್ಟು ಹರಿಶಿತ್ ಜಾಕಿ ಪಡೆದರು. ದ್ವಿತೀಯ ಸ್ಥಾನವನ್ನು ನೆಲ್ಲಿಕಾರು ಸ್ವಸ್ತಿಕ್ ಯುವ ಬಂದವರು ಎ.ಜಾಕಿ ಕಕ್ಕೆಪದವು ಗೌತಮ್ ಗೌಡ ಪಡೆದರು.

    Post Views: 182

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.