Facebook Twitter Instagram
    Thursday, June 11
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕನ್ನಡ-ತುಳು ಮರೆತಿದ್ದ ಮಗನಿಗೆ ಹಳೆಯ ಊರಿನ ನೆನಪು; 26 ವರ್ಷಗಳ ಬಳಿಕ ಕುಟುಂಬದ ಜೊತೆ ಸೇರಿದ ಸತೀಶ್
    ಇತ್ತೀಚಿನ ಸುದ್ದಿ

    ಕನ್ನಡ-ತುಳು ಮರೆತಿದ್ದ ಮಗನಿಗೆ ಹಳೆಯ ಊರಿನ ನೆನಪು; 26 ವರ್ಷಗಳ ಬಳಿಕ ಕುಟುಂಬದ ಜೊತೆ ಸೇರಿದ ಸತೀಶ್

    June 11, 2026
    Share

    ಧರ್ಮಸ್ಥಳ : ಹೆತ್ತ ತಾಯಿಯ ನಿರಂತರ ಪ್ರಾರ್ಥನೆ ಮತ್ತು ದೇವರ ಮೇಲಿನ ನಂಬಿಕೆ ಕೊನೆಗೂ ಸುಳ್ಳಾಗಲಿಲ್ಲ. ಬರೋಬ್ಬರಿ 26 ವರ್ಷಗಳ ಹಿಂದೆ, ಅಂದರೆ 2000ನೇ ಇಸವಿಯಲ್ಲಿ ಕೇವಲ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ಹೋಗಿದ್ದ ಮಗ, ಈಗ ಮುಸ್ಲಿಂ ಧರ್ಮ ಸ್ವೀಕರಿಸಿ, ವಿವಾಹವಾಗಿ ಇಬ್ಬರು ಮಕ್ಕಳ ತಂದೆಯಾದ ಬಳಿಕ ಪವಾಡ ಸದೃಶ ರೀತಿಯಲ್ಲಿ ಮರಳಿ ತಾಯಿಯ ಮಡಿಲು ಸೇರಿರುವ ಅಪರೂಪದ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳದ ಅಶೋಕನಗರ ನಿವಾಸಿ ಸತೀಶ್ (ಪ್ರಸ್ತುತ ಸಲೀಂ ಅಬ್ದುಲ್ ಅನ್ಸಾರಿ) ಮರಳಿ ಬಂದ ಮಗ.2000ನೇ ಇಸವಿಯಲ್ಲಿ ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿದ್ದ 12 ವರ್ಷದ ಪುಟ್ಟ ಬಾಲಕ ಸತೀಶ್, ಸರ್ಕಸ್ ಕಂಪನಿ ಊರು ಬಿಡುವಾಗ ಅವರೊಂದಿಗೇ ಹೊರಟುಹೋಗಿದ್ದ. ಅಲ್ಲಿಂದ ಮಹಾರಾಷ್ಟ್ರ ಸೇರಿದ ಆತ, ಕಳೆದ 26 ವರ್ಷಗಳಿಂದ ಅಲ್ಲಿಯೇ ವಿವಿಧ ಕೆಲಸಗಳನ್ನು ಮಾಡಿಕೊಂಡಿದ್ದ. ದೀರ್ಘಕಾಲದಿಂದಾಗಿ ಆತ ತನ್ನ ಹೆತ್ತವರು, ಸ್ವಂತ ಊರು ಹಾಗೂ ಮಾತೃಭಾಷೆಯಾದ ಕನ್ನಡ ಮತ್ತು ತುಳುವನ್ನು ಸಂಪೂರ್ಣವಾಗಿ ಮರೆತುಹೋಗಿದ್ದ.ಇತ್ತೀಚೆಗೆ ಸತೀಶ್ ಮಹಾರಾಷ್ಟ್ರದ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳ ಕ್ಷೇತ್ರಕ್ಕೆ ಪ್ರವಾಸಕ್ಕೆ ಬಂದಿದ್ದ. ಈ ಸಂದರ್ಭದಲ್ಲಿ ಆತ ಅಂದು ಸರ್ಕಸ್ ನಡೆಯುತ್ತಿದ್ದ ಜಾಗಕ್ಕೆ ಹೋದಾಗ ಹಳೆಯ ನೆನಪುಗಳು ಇದ್ದಕ್ಕಿದ್ದಂತೆ ಮರುಕಳಿಸಿವೆ. “ಇದೇ ನನ್ನ ಸ್ವಂತ ಊರು” ಎಂದು ಖಾತ್ರಿಯಾದ ತಕ್ಷಣ, ಆತನಿಗೆ ತನ್ನ ತಮ್ಮಂದಿರ ಹೆಸರುಗಳು ನೆನಪಿಗೆ ಬಂದಿವೆ. ತಕ್ಷಣವೇ ಸ್ಥಳೀಯ ಅಂಗಡಿಯವರನ್ನು ಹಾಗೂ ಸಾರ್ವಜನಿಕರನ್ನು ವಿಚಾರಿಸಿ, ಅರಸುತ್ತಾ ಕೊನೆಗೂ ತನ್ನ ಹಳೆಯ ಮನೆಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾನೆ.ಮಗ ನಾಪತ್ತೆಯಾದ ದಿನದಿಂದಲೂ ತಾಯಿ ಮಗನಿಗಾಗಿ ಧರ್ಮಸ್ಥಳ ಮಂಜುನಾಥ ಸ್ವಾಮಿ, ಕಟೀಲು ದುರ್ಗಾಪರಮೇಶ್ವರಿ ಹಾಗೂ ಪಣೋಲಿಬೈಲ್ ಕಲ್ಲುರ್ಟಿ ದೈವಸ್ಥಾನಕ್ಕೆ ನಿರಂತರವಾಗಿ ಹರಕೆಗಳನ್ನು ಹೊತ್ತು ಕಣ್ಣೀರಿಡುತ್ತಿದ್ದರು. ಇತ್ತೀಚೆಗಷ್ಟೇ ತೀವ್ರ ಅನಾರೋಗ್ಯಕ್ಕೊಳಗಾಗಿದ್ದ ತಾಯಿ, ಉಳಿದ ಮಕ್ಕಳ ಬಳಿ “ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆ ನೋಡಬೇಕು, ಅವನನ್ನು ಕರೆತನ್ನಿ” ಎಂದು ಕಣ್ಣೀರಿಟ್ಟಿದ್ದರು. ಹೆತ್ತ ಕರುಳಿನ ಆ ಕ್ರಂದನಕ್ಕೆ ಕೊನೆಗೂ ಭಗವಂತ ಉತ್ತರಿಸಿದ್ದಾನೆ.ಮನೆ ಬಿಟ್ಟು ಹೋಗುವಾಗ ಸತೀಶ್ ಆಗಿದ್ದ ಈತ, ಮಹಾರಾಷ್ಟ್ರದಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿದ್ದಾನೆ. ಅಲ್ಲಿಯೇ ತಾಲೀಮಾ ಎಂಬಾಕೆಯನ್ನು ವಿವಾಹವಾಗಿದ್ದು, ಈ ದಂಪತಿಗೆ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ. ಸದ್ಯ ಕನ್ನಡ, ತುಳು ಮರೆತು ಸಂಪೂರ್ಣ ಹಿಂದಿ ಭಾಷೆಯಲ್ಲೇ ಮಾತನಾಡುವ ಸಲೀಂ, ಹೆಂಡತಿ ಮತ್ತು ಮಕ್ಕಳೊಂದಿಗೆ ಹೆತ್ತ ತಾಯಿಯ ನಿವಾಸದಲ್ಲಿದ್ದು, ಇಡೀ ಕುಟುಂಬದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

    Post Views: 2

    karnataka PoliceInvestigation

    Related Posts

    ವಿದ್ಯುತ್ ಸಂಪರ್ಕ ಸರಿಪಡಿಸಿದ ಬಳಿಕ ಬೈಕ್‌ನಲ್ಲೇ ಕುಸಿದ ಮೆಸ್ಕಾಂ ಉದ್ಯೋಗಿ

    June 11, 2026

    ಡಿವೈಡರ್‌ಗಳ ಮೇಲಿನ ಫ್ಲೆಕ್ಸ್-ಬ್ಯಾನರ್‌ಗಳಿಗೆ ಡಿಸಿ ಬ್ರೇಕ್: ತಕ್ಷಣ ತೆರವುಗೊಳಿಸಲು ಆದೇಶ

    June 11, 2026

    ಸ್ಥಾಯಿ ವಾರಂಟ್ ಜಾರಿಯಲ್ಲಿದ್ದ ಆರೋಪಿ ಕೊನೆಗೂ ಪೊಲೀಸರ ಬಲೆಗೆ

    June 11, 2026
    About
    About

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕನ್ನಡ-ತುಳು ಮರೆತಿದ್ದ ಮಗನಿಗೆ ಹಳೆಯ ಊರಿನ ನೆನಪು; 26 ವರ್ಷಗಳ ಬಳಿಕ ಕುಟುಂಬದ ಜೊತೆ ಸೇರಿದ ಸತೀಶ್

    June 11, 2026

    ವಿದ್ಯುತ್ ಸಂಪರ್ಕ ಸರಿಪಡಿಸಿದ ಬಳಿಕ ಬೈಕ್‌ನಲ್ಲೇ ಕುಸಿದ ಮೆಸ್ಕಾಂ ಉದ್ಯೋಗಿ

    June 11, 2026

    ಡಿವೈಡರ್‌ಗಳ ಮೇಲಿನ ಫ್ಲೆಕ್ಸ್-ಬ್ಯಾನರ್‌ಗಳಿಗೆ ಡಿಸಿ ಬ್ರೇಕ್: ತಕ್ಷಣ ತೆರವುಗೊಳಿಸಲು ಆದೇಶ

    June 11, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.