Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಜ್ಯ ಸುದ್ದಿ»20 ಅಡಿ ಎತ್ತರದಿಂದ ಕೆಳಗೆ ಬಿದ್ದು ಯುವಕ ಸಾವು, ಮೇಳದ ರೈಡ್‌ಗಳು ಬಂದ್
    ರಾಜ್ಯ ಸುದ್ದಿ

    20 ಅಡಿ ಎತ್ತರದಿಂದ ಕೆಳಗೆ ಬಿದ್ದು ಯುವಕ ಸಾವು, ಮೇಳದ ರೈಡ್‌ಗಳು ಬಂದ್

    May 27, 2026
    Share

    ನಾಲಂದಾ (ಬಿಹಾರ): ಬಣ್ಣ ಬಣ್ಣದ ವಿದ್ಯುತ್ ದೀಪಗಳು ಹಾಗೂ ಜನರ ಹರ್ಷೋದ್ಗಾರಗಳ ನಡುವೆ ಸಂಭ್ರಮದಿಂದ ನಡೆಯುತ್ತಿದ್ದ ಬಿಹಾರದ ಸುಪ್ರಸಿದ್ಧ ‘ರಾಜಗೀರ್ ಮಲಮಾಸ್ ಮೇಳ’ದಲ್ಲಿ ಸೋಮವಾರ ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಅತ್ಯಂತ ವೇಗವಾಗಿ ತಿರುಗುತ್ತಿದ್ದ Swing ನ ಸುರಕ್ಷತಾ ಬೆಲ್ಟ್ ಕಳಚಿದ ಪರಿಣಾಮ, 25 ವರ್ಷದ ಯುವಕನೊಬ್ಬ ಸುಮಾರು 20 ಅಡಿ ಎತ್ತರದಿಂದ ಕೆಳಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ್ದಾನೆ.

    ನವಾದಾ ಜಿಲ್ಲೆಯ ನಿವಾಸಿಯಾದ ಅಮಾನ್ ಕುಮಾರ್ (25) ಮೃತಪಟ್ಟ ದುರದೃಷ್ಟಕರ ಯುವಕನಾಗಿದ್ದಾನೆ. ಈ ಭೀಕರ ಅಪಘಾತದ ಲೈವ್ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರ ಎದೆ ನಡುಗಿಸುವಂತಿದೆ.

    ಮೃತ ಅಮಾನ್ ಕುಮಾರ್ ತನ್ನ ಸ್ನೇಹಿತರೊಂದಿಗೆ ಐತಿಹಾಸಿಕ ರಾಜಗೀರ್ ಮೇಳಕ್ಕೆ ಬಂದಿದ್ದನು. ಮೇಳದ ಪ್ರಮುಖ ಆಕರ್ಷಣೆಯಾಗಿದ್ದ, ಅತ್ಯಂತ ವೇಗವಾಗಿ ಗಾಳಿಯಲ್ಲಿ ಆಡುವ ‘ಸ್ಟ್ರಿಂಗ್ ಜೂಲಾ’ ಕ್ಕೆ ಹತ್ತಿದ್ದನು. ಅದು ಅತಿ ವೇಗವಾಗಿ ಚಲಿಸುತ್ತಿದ್ದಾಗ (ಸುಮಾರು 20 ಅಡಿಗಿಂತಲೂ ಹೆಚ್ಚು ಎತ್ತರದಲ್ಲಿದ್ದಾಗ), ಅಮಾನ್ ಕುಳಿತಿದ್ದ ಸೀಟಿನ ಸುರಕ್ಷತಾ ಬೆಲ್ಟ್ ತಾಂತ್ರಿಕ ದೋಷದಿಂದಾಗಿ ಇದ್ದಕ್ಕಿದ್ದಂತೆ ಕಳಚಿಕೊಂಡಿದೆ. ವೇಗದ ತೀವ್ರತೆಗೆ ಸಿಲುಕಿದ ಯುವಕ ಗಾಳಿಯಲ್ಲೇ ಹಾರಿಹೋಗಿ, ನೇರವಾಗಿ ಕೆಳಗಿದ್ದ ದಪ್ಪನೆಯ ಕಬ್ಬಿಣದ ಪೈಪ್‌ಗಳಿಗೆ ರಭಸವಾಗಿ ಅಪ್ಪಳಿಸಿ ಬಳಿಕ ನೆಲಕ್ಕೆ ಬಿದ್ದಿದ್ದಾನೆ.

    ದುರಂತ ಕಣ್ಣೆದುರೇ ಸಂಭವಿಸುತ್ತಿದ್ದಂತೆ ಜಾತ್ರೆಯಲ್ಲಿದ್ದ ನೂರಾರು ಪ್ರೇಕ್ಷಕರು ಕಿರುಚಾಡುತ್ತಾ ದಿಕ್ಕಾಪಾಲಾಗಿ ಓಡಿದ್ದಾರೆ. ತಲೆ ಮತ್ತು ಎದೆಗೆ ಗಂಭೀರ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಅಮಾನ್‌ನನ್ನು ಸ್ಥಳೀಯರು ತಕ್ಷಣವೇ ರಾಜಗೀರ್ ಉಪವಿಭಾಗೀಯ ಆಸ್ಪತ್ರೆಗೆ ಸಾಗಿಸಿದರು. ಆದರೆ ಪರಿಸ್ಥಿತಿ ತೀರಾ ಹದಗೆಟ್ಟಿದ್ದರಿಂದ ವೈದ್ಯರು ಪಾಟ್ನಾದ ಪಿಎಂಸಿಹೆಚ್ (PMCH) ಆಸ್ಪತ್ರೆಗೆ ರೆಫರ್ ಮಾಡಿದರು. ದುರದೃಷ್ಟವಶಾತ್, ಪಾಟ್ನಾ ತಲುಪುವ ಮುನ್ನವೇ ಯುವಕ ದಾರಿಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ.

    ಘಟನೆಗೆ ಮೇಳದ ಆಡಳಿತ ಮಂಡಳಿ ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ತಕ್ಷಣವೇ ಎಚ್ಚೆತ್ತ ನಾಲಂದಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ತನಿಖೆಗೆ ಆದೇಶಿಸಿದೆ. ಸ್ವಿಂಗ್ ನ ಗುತ್ತಿಗೆದಾರ ಮತ್ತು ಆಪರೇಟರ್ ವಿರುದ್ಧ ರಾಜಗೀರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಆಪರೇಟರ್‌ನನ್ನು ಬಂಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಮೇಳದಲ್ಲಿದ್ದ ಎಲ್ಲಾ ದೊಡ್ಡ ಹಾಗೂ ಅಪಾಯಕಾರಿ ರೈಡ್‌ಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಡಳಿತ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

    Post Views: 154

    PoliceInvestigation

    Related Posts

    CID ಪೊಲೀಸರಿಂದ IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಅರೆಸ್ಟ್

    August 30, 2026

    ರಾಜ್ಯದಲ್ಲಿ ‘ಪೊಲೀಸ್ ರಾಜ್ ವ್ಯವಸ್ಥೆ’ ಕೊನೆಗೊಳ್ಳಬೇಕು, ಇಲ್ಲವಾದರೆ ನ್ಯಾಯಾಲಯವೇ ಕಠಿಣ ಕ್ರಮ: ಹೈಕೋರ್ಟ್ ಎಚ್ಚರಿಕೆ

    August 28, 2026

    ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು ದಿನದ 24 ಗಂಟೆಯೂ ಸುಸ್ಥಿತಿಯಲ್ಲಿರಬೇಕು- ಹೈಕೋರ್ಟ್ ಖಡಕ್ ಆದೇಶ

    August 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಮಂಗಳೂರು : ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026

    ಕಾಸರಗೋಡು: ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ- ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.