ಬೆಂಗಳೂರು: ಪಿಎಸ್‌ಐ ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಎಡಿಜಿಪಿ ಅಮೃತ್ ಪೌಲ್ ಬಂಧನವಾಗಿದೆ. ಕರ್ನಾಟಕದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೊಲೀಸ್ ಉನ್ನತ ಅಧಿಕಾರಿಯ ಬಂಧನವಾಗಿದೆ. ಪಿಎಸ್‌ಐ ಪರೀಕ್ಷಾ ಅಕ್ರಮಕ್ಕೆ ನೇಮಕಾತಿಯಲ್ಲಿ ಇದು ದೊಡ್ಡ ಬಂಧನವಾಗಿದೆ. ಎಡಿಜಿಪಿ ಅಮೃತ್ ಪೌಲ್ ಬರೋಬ್ಬರಿ-25 ಅಭ್ಯರ್ಥಿಗಳ ಜೊತೆಗೆ ಅಮೃತ್ ಪೌಲ್ ಡೀಲ್ ಮಾಡಿದ್ದರು. ತಲಾ 30 ಲಕ್ಷ ಹಣವನ್ನ ಅಮೃತ್ ಪೌಲ್ ಪಡೆದು, ಡಿವೈಎಸ್ಪಿ ಶಾಂತಕುಮಾರ್ ಅವರಿಂದ ಡೀಲ್ ಮಾಡಿಸುತ್ತಿದ್ದು,25 ಜನರ ಬಳಿ ಅಮೃತ್ ಪೌಲ್ ಒಟ್ಟು 5 ಕೋಟಿ ಡೀಲ್ ಮಾಡಿದ್ದರು. 545 ಪಿಎಸ್ ಐ ಹುದ್ದೆಗಳ ಡೀಲ್ ನಡೆದಾಗ ರಿಕ್ರ್ಯೂಟ್ ಮೆಂಟ್ ಎಡಿಜಿಯಾಗಿದ್ದ ಅಮೃತ್ ಪೌಲ್ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಡಿವೈ ಎಸ್ ಪಿ ಶಾಂತಕುಮಾರ್ ವಿಚಾರಣೆಯಲ್ಲಿ ಅಮೃತ್ ಪೌಲ್ ಹೆಸರು ಬಾಯ್ಬಿಟ್ಟಿದ್ದು, ಈಗ ಎಡಿಜಿಪಿ ಅಮೃತ್ ಪೌಲ್ ಅರೆಸ್ಟ್ ಆಗಿದ್ದಾರೆ.
Author: main-admin
ಕಾಳಿ ಎನ್ನುವ ಸಾಕ್ಷ್ಯಚಿತ್ರದ ಪೋಸ್ಟರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಪೋಸ್ಟರ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಹೌದು ಭಾರತೀಯ ಚಲನಚಿತ್ರ ನಿರ್ಮಾಪಕಿ, ಕವಯಿತ್ರಿ ಮತ್ತು ನಟಿ ಲೀನಾ ಮಣಿಮೇಕಲೈ ಅವರು ಬಿಡುಗಡೆ ಮಾಡಿದ ಹೊಸ ಪೋಸ್ಟರ್ ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ನಟಿ ಲೀನಾ ಮಣಿಮೇಕಲೈ ಅವರು ತಮ್ಮ ಡಾಕ್ಯುಮೆಂಟರಿಯ ಪೋಸ್ಟರ್ ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಪೋಸ್ಟರ್ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಟ್ವಿಟರ್ ನಲ್ಲಿ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ.ಇನ್ನು ಈ ಪೋಸ್ಟರ್ ನಲ್ಲಿ ಹಿಂದೂ ದೇವತೆ ಕಾಳಿಯು ಸಿಗರೇಟ್ ಸೇದುತ್ತಿರುವುದನ್ನು ತೋರಿಸಲಾಗಿದೆ. ಲೀನಾ ಅವರು ಆ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ್ದಾರೆ ಎಂದು ಹಲವರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಾಳಿಯ ವೇಷದಲ್ಲಿರುವ ಕಲಾವಿದೆಯಾ ಒಂದು ಕೈಯಲ್ಲಿ ತ್ರಿಶೂಲ ಮತ್ತು ಒಂದು ಕೈಯಲ್ಲಿ LGBTQ ಸಮುದಾಯದ ಧ್ವಜವನ್ನು ಹಿಡಿದಿರೋದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ನಿರ್ಮಾಪಕಿ ಲೀನಾ…
ಮಂಗಳೂರು:ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಯುವಕ ಶವವಾಗಿ ಕೂಳೂರಿನ ನದಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ಮೃತರನ್ನು ಕಾವೂರಿನ ಚೇತನ್ ಕುಮಾರ್(28) ಎಂದು ಗುರುತಿಸಲಾಗಿದೆ. ಚೇತನ್ ಕುಮಾರ್ ಎರಡು ದಿನಗಳ ಹಿಂದೆ ನಾಪತ್ತೆಯಗಿದ್ದು, ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂದು ಕೂಳೂರು ಸೇತುವೆಯಲ್ಲಿ ಶವವೊಂದು ಪತ್ತೆಯಾಗಿದ್ದು, ಶವವನ್ನು ನಾಪತ್ತೆಯಾಗಿದ್ದ ಚೇತನ್ ಎಂದು ಗುರುತಿಸಲಾಗಿದೆ.
ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಾಲುಪುಡಿ ಪ್ಯಾಕೆಟ್ ನೊಳಗಡೆ ಬಚ್ಚಿಟ್ಟು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 31,31,440 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಕಾಸರಗೋಡು ಮೂಲದ ಪ್ರಯಾಣಿಕ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದ. ಕಸ್ಟಮ್ಸ್ ಅಧಿಕಾರಿಗಳು ಈತನನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಈತ ಹಾಲಿನಪುಡಿಯ ಪ್ಯಾಕೆಟ್ ನೊಳಗಡೆ ಬಚ್ಚಿಟ್ಟು ಚಿನ್ನ ಸಾಗಾಟ ಮಾಡಿರೋದು ಪತ್ತೆಯಾಗಿದೆ. ತಕ್ಷಣ ಪ್ರಯಾಣಿಕ ಸೇರಿದಂತೆ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಈತನಿಂದ 602.200 ಗ್ರಾಂ ತೂಕದ 31,31,440 ಲಕ್ಷ ರೂ. ಮೌಲ್ಯದ 24 ಕ್ಯಾರೆಟ್ ಶುದ್ಧ ಚಿನ್ನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.
ಪುತ್ತೂರು; ಕಾರು- ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ತಂದೆ ಮೃತಪಟ್ಟು, ಮಗ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಕುಂಬ್ರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಪಂಜಿಗುಡ್ಡೆ ನಿವಾಸಿ ರಘುರಾಮ ಶೆಟ್ಟಿ ಮೃತರು.ಇವರ ಮಗ ಕೂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಘುರಾಮ್ ಅವರು ತನ್ನ ಮಗನನ್ನು ಬೆಂಗಳೂರು ಬಸ್ ಗೆ ಬಿಡಲೆಂದು ಮನೆಯಿಂದ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಮಾರುತಿ ಓಮ್ನಿ ಕಾರು ಢಿಕ್ಕಿ ಹೊಡೆದಿದೆ.
ಮುಂಬೈ: ಮಹಾರಾಷ್ಟ್ರದ ನೂತನ ಸರ್ಕಾರಕ್ಕೆ ವಿಶ್ವಾಸಮತ ಯಾಚನೆಗೆ ಇನ್ನೂ ಒಂದು ದಿನ ಬಾಕಿ ಇರುವಾಗಲೇ ವಿಧಾನಸಭೆ ಸ್ಪೀಕರ್ ಆಯ್ಕೆ ನಡೆದಿದೆ. ರಾಹುಲ್ ನಾರ್ವೇಕರ್ ಅವರನ್ನು ನೂತನ ಸ್ಪೀಕರ್ ಆಗಿ ಆಯ್ಕೆ ಮಾಡಲಾಗಿದೆ. ಕೊಲಾಬಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ರಾಹುಲ್ ನಾರ್ವೇಕರ್ ಅವರ ಹೆಸರನ್ನು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರು ನಾಮ ನಿರ್ದೇಶನ ಮಾಡಿದರು. ಬಳಿಕ ನಡೆದ ಚುನಾವಣೆಯಲ್ಲಿ 164 ಮತ ಪಡೆದು ನಾರ್ವೇಕರ್ ಸ್ಪೀಕರ್ ಹುದ್ದೆಗೇರಿದರು. ಶಿವಸೇನೆಯ ರಾಜನ್ ಸಾಲ್ವಿ 107 ಮತಗಳೊಂದಿಗೆ ಪರಾಭವಗೊಂಡರು. ಕೈ ಎತ್ತುವ ಮೂಲಕ ಚುನಾವಣೆ ನಡೆಸಲಾಯಿತು. 2021ರ ಫೆಬ್ರವರಿಯಲ್ಲಿ ಕಾಂಗ್ರೆಸ್‌ನ ನಾನಾ ಪಟೋಲ್ ಸ್ಪೀಕರ್ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಹುದ್ದೆಗೆ ಈಗ ಆಯ್ಕೆ ನಡೆದಿದ್ದು, ಡೆಪ್ಯುಟಿ ಸ್ಪೀಕರ್ ನರಹರಿ ಜೀರವಾಲ್ ಅವರು ಅಧಿಕಾರ ಹಸ್ತಾಂತರಿಸಿದರು. ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಶಿವಸೇನೆಯ ಯುವ ಘಟಕದಲ್ಲಿ ವಕ್ತಾರರಾಗಿ ಕೆಲಸ ಮಾಡಿದ ಅನುಭವ ನಾರ್ವೇಕರ್ ಅವರಿಗಿದೆ. 2014ರಲ್ಲಿ ಶಿವಸೇನೆ ತೊರೆದು ಎನ್‌ಸಿಪಿ ಸೇರಿದ್ದರು.…
ಬಲೂಚಿಸ್ತಾನ: ಬಸ್ ಕಂದರಕ್ಕೆ ಉರುಳಿದ ಪರಿಣಾಮ ಸುಮಾರು 19 ಮಂದಿ ಪ್ರಯಾಣಿಕರು ಸಾವನ್ನಪ್ಪಿ, 12 ಜನರು ಗಾಯಗೊಂಡಿರುವ ಘಟನೆ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ನಡೆದಿದೆ. ಮಳೆಯ ನಡುವೆ ಬಸ್ ಅತಿ ವೇಗವಾಗಿ ಚಲಿಸಿದ್ದು,ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದು, ಬಸ್ ಆಳವಾದ ಕಂದಕಕ್ಕೆ ಬಿದ್ದು ಹಲವು ಬಾರಿ ಪಲ್ಟಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ರೀನಗರ: ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಂಘಟನೆಯ ಇಬ್ಬರು ಶಸ್ತ್ರಧಾರಿ ಭಯೋತ್ಪಾದಕರನ್ನು ಗ್ರಾಮಸ್ಥರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ಇಬ್ಬರನ್ನೂ ಪೊಲೀಸರು ಇದೀಗ ಬಂಧಿಸಿದ್ದಾರೆ. ಈ ಪೈಕಿ ರಜೌರಿ ಜಿಲ್ಲೆಯ ನಿವಾಸಿ ತಲಿಬ್ ಹುಸೇನ್ ಎಲ್‌ಇಟಿ ಸಂಘಟನೆಯ ಕಮಾಂಡರ್ ಆಗಿದ್ದಾನೆ. ಅಲ್ಲದೆ ಈತನನ್ನು ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು ಶೋಧ ನಡೆಸುತ್ತಿದ್ದರು. ಅಲ್ಲದೆ ಜಿಲ್ಲೆಯಲ್ಲಿ ಐಇಡಿ ಸ್ಫೋಟ ಪ್ರಕರಣದ ಮಾಸ್ಟರ್ ಮೈಂಡ್ ಆಗಿದ್ದ ಫೈಜಲ್ ಅಹ್ಮದ್ ದರ್ ನ್ನು ತುಕ್ಸಾನ್ ಗ್ರಾಮದಲ್ಲಿ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ವರದಿಯಾಗಿದೆ. ಎರಡು ಎಕೆ ಅಸಾಲ್ಟ್ ರೈಫಲ್ಸ್, 7 ಗ್ರೆನೇಡ್ ಗಳು, ಒಂದು ಪಿಸ್ತೂಲ್‌ನ್ನು ಪೊಲೀಸರು ಬಂಧಿತರಿಂದ ವಶಪಡಿಸಿಕೊಂಡಿದ್ದಾರೆ. ಉಗ್ರರನ್ನು ಹಿಡಿದುಕೊಟ್ಟ ಗ್ರಾಮಸ್ಥರ ಸಾಹಸಕ್ಕೆ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ಡಿಜಿಪಿ ದಲ್ಬಿರ್ ಸಿಂಗ್ ಅವರು 2 ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.
ಮಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ರಾಜ್ಯದಲ್ಲಿ ಪದವಿ ಪೂರ್ವ ತರಗತಿಗಳಿಗೆ ಪಠ್ಯ ಕ್ರಮವನ್ನು ಡಿಸೆಂಬರ್ ಅಂತ್ಯದ ವೇಳೆಗೆ ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ. ಮಂಗಳೂರು ನಗರದ ಶಕ್ತಿ ಪಿಯು ಕಾಲೇಜಿನಲ್ಲಿ ದ.ಕ. ಪ್ರಾಂಶುಪಾಲರ ಸಂಘ, ಚಾಣಕ್ಯ ವಿವಿ ಹಾಗೂ ವಿದ್ಯಾಭಾರತಿ ಆಶ್ರಯದಲ್ಲಿ ಶನಿವಾರ ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಏರ್ಪಡಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ಕಾರ್ಯಾಗಾರ ಸಮಾರೋಪದಲ್ಲಿ ಅವರು ಮಾತನಾಡಿದರು. ಈಗಾಗಲೇ 1ರಿಂದ 12ನೇ ತರಗತಿ ವರೆಗಿನ ಪಠ್ಯಕ್ರಮವನ್ನು ಬೇರೆ ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪಿಯು ತರಗತಿಗಳಿಗೆ ಹೊಸ ಶಿಕ್ಷಣ ನೀತಿಯಡಿ ಪಠ್ಯಕ್ರಮ ಅಳವಡಿಸಿ ಡಿಸೆಂಬರ್ ವೇಳೆಗೆ ಅಂತಿಮಗೊಳಿಸಿ ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದರು. ಸಲಹೆಗೆ ಮತ್ತೆ ಅವಕಾಶ: ಹೊಸ ಶಿಕ್ಷಣ ನೀತಿ ಜಾರಿಗೆ ತರಬೇಕಾದರೆ ಪಿಯು ಉಪನ್ಯಾಸಕರಿಂದಲೂ ಅಮೂಲ್ಯ ಸಲಹೆ ಕೇಳಲಾಗಿತ್ತು. ಆದರೆ ಅದು…
ಥಾಣೆ: ಆಟವಾಡುವಾಗ ಗಾಯಗೊಂಡ ಶಾಲಾ ಬಾಲಕಿಯ ನೆರವಿಗೆ ಬಂದ ಅಮೆಜಾನ್ ಡೆಲಿವರಿ ಬಾಯ್ ಒಬ್ಬರ ಕೆಲಸಕ್ಕೆ ನೆಟ್ಟಿಗರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಅಮೆಜಾನ್ ಡೆಲಿವರಿ ಬಾಯ್ ರವಿ ಎಂಬಾತನೇ ಮಾನವೀಯ ಕೆಲಸಕ್ಕಾಗಿ ಶ್ಲಾಘನೆಗೆ ಒಳಪಟ್ಟಾತ. ಮಹಾರಾಷ್ಟ್ರದ ಥಾಣೆಯ ಶಾಲೆಯೊಂದರ ವಿದ್ಯಾರ್ಥಿನಿ ಆಟವಾಡುತ್ತಿದ್ದಾಗ ಕಬ್ಬಿಣದ ಗೇಟ್ ಸಡಿಲಗೊಂಡು ಆಕೆಯ ಕೆನ್ನೆಯ ಮೂಲಕ ಗೇಟ್‌ನ ಒಂದು ಭಾಗ ಚುಚ್ಚಿಕೊಂಡಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಡೆಲಿವರಿ ಬಾಯ್ ಇದನ್ನು ನೋಡಿ ತತ್‌ಕ್ಷಣ ಬಾಲಕಿ ಬಳಿಗೆ ಆಗಮಿಸಿ ಲೋಹದ ತುಂಡನ್ನು ಹಿಡಿದು ಆಕೆಗೆ ಹೆಚ್ಚಿನ ರಕ್ತಸ್ರಾವ ಆಗದಂತೆ ತಡೆದರು. ವೈದ್ಯರು ಸ್ಥಳಕ್ಕೆ ಆಗಮಿಸುವವರೆಗೂ ಡೆಲಿವರಿ ಬಾಯ್ ಈ ಸಾಹಸ ಮೆರೆದರು. ಬಳಿಕ ಸಮೀಪದ ವಸಂತ ವಿಹಾರ್ ಆಸ್ಪತ್ರೆಯ ವೈದ್ಯಕೀಯ ತಂಡ ಆಗಮಿಸಿ ಗೇಟ್‌ನ ಒಂದು ಭಾಗವನ್ನೇ ಕತ್ತರಿಸಿ ಬಾಲಕಿಯನ್ನು ರಕ್ಷಿಸಿದರು. ಆನಂತರ ಬಾಲಕಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತು. ರವಿ ಅವರು ಮಾಡಿದ ಈ ಮಾನವೀಯ ಕಾರ್ಯದ ವೀಡಿಯೋವನ್ನು ಸಾಲುಂಕೆ ಎಂಬವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು, ಇದನ್ನು ಹಲವಾರು…