ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ನೂತನ ಡಿಸಿಪಿ(ಕಾನೂನು ಹಾಗೂ ಸುವ್ಯವಸ್ಥೆ)ಯಾಗಿ ಅನ್ಷು ಕುಮಾರ್ ಅವರು ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಕರಾವಳಿ ಕಾವಲುಪಡೆಯ ಎಸ್ಪಿಯಾಗಿರುವ ಅನ್ಶು ಕುಮಾರ್ 2018ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ. ತಕ್ಷಣದಿಂದೇ ಅವರು ಅಧಿಕಾರ ವಹಿಸಿಕೊಳ್ಳುವಂತೆ ಸರಕಾರ ಆದೇಶಿಸಿದೆ.
Author: main-admin
ಮಂಗಳೂರು: ನಗರದಲ್ಲಿ ಇಂದು ಬೆಳಗ್ಗಿನಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ.ಬೆಂಗಳೂರು, ಹೈದರಾಬಾದ್ ನಿಂದ ಆಗಮಿಸುವ ವಿಮಾನಗಳು ತಡವಾಗಿ ಬಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಬೆಂಗಳೂರಿನಿಂದ ಟೇಕ್ ಆಫ್ ಆಗಿರುವ ಈ ವಿಮಾನವು 16 ನಿಮಿಷ ತಡವಾಗಿ ಲ್ಯಾಂಡ್ ಆಗಮಿಸಿದೆ. ಹೈದರಾಬಾದ್ ನಿಂದ ಆಗಮಿಸಿರುವ ವಿಮಾನವು 7 ನಿಮಿಷ ವಿಳಂಬವಾಗಿ ಲ್ಯಾಂಡ್ ಆಗಿದೆ. ಮಂಗಳೂರಿನಿಂದ ಕೋಲ್ಕತ್ತಾಗೆ ತೆರಳುವ ವಿಮಾನವ 50 ನಿಮಿಷ ತಡವಾಗಿ ಟೇಕಾಫ್ ಆಗಿದೆ.
ಮಂಗಳೂರು: ಪಡೀಲು ಮತ್ತು ಮಂಗಳೂರು ಜಂಕ್ಷನ್ ವಿಭಾಗದ ನಡುವೆ (181/200 ಕಿ.ಮೀ.) ಬೆಳಗ್ಗೆ 9ಗಂಟೆ ಸುಮಾರಿಗೆ ಗುಡ್ಡ ಕುಸಿತವಾಗಿದೆ. ಪರಿಣಾಮ ಇಂದು ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ರೈಲು ನಂ.06488 ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಸೆಂಟ್ರಲ್ ಅನ್ ರಿಸರ್ವ್ಡ್ ಎಕ್ಸ್‌ಪ್ರೆಸ್ ವಿಶೇಷ ಸಂಚಾರ ಇಂದು ರದ್ದುಗೊಂಡಿದೆ. ಅದೇ ರೀತಿ ರೈಲು ಸಂಖ್ಯೆ.06489 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರಸ್ತೆ ಕಾಯ್ದಿರಿಸದ ಎಕ್ಸ್‌ಪ್ರೆಸ್ ವಿಶೇಷ ಸೇವೆಯನ್ನು ಇಂದು ರದ್ದುಗೊಳಿಸಲಾಗಿದೆ. ರೈಲು ಹಳಿಯ ಮೇಲೆ ಅಲ್ಪ ಪ್ರಮಾಣದ ಮಣ್ಣು ಬಿದ್ದಿರುವ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ತಕ್ಷಣದಿಂದಲೇ ಮಣ್ಣು ತೆರವು ಕಾರ್ಯ ನಡೆಯುತ್ತಿದೆ. ದುರಸ್ತಿ ಕಾಮಗಾರಿ ಮುಗಿದ ತಕ್ಷಣ ಮತ್ತೆ ರೈಲು ಸಂಚಾರ ಸೇವೆ ಎಂದಿನಂತೆ ನಡೆಯಲಿದೆ.
ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವೈದ್ಯರು ಮತ್ತು ಸಿಬಂದಿಯ ಬಾಕಿ ವೇತನ ಪಾವತಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳಲ್ಲಿ ಚರ್ಚಿಸಿದ್ದು ಮನವಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ. ಎಡಿಸಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಪರಿಶೀಲನ ಸಮಿತಿ ರಚಿಸಿ ಆಸ್ಪತ್ರೆಗೆ ಅವಶ್ಯ ಇರುವ ವೈದ್ಯಾಧಿಕಾರಿ, ಸಿಬಂದಿವರ್ಗ ನೇಮಿಸುವುದು ಹಾಗೂ ಸಿಬಂದಿಗೆ ಬಾಕಿ ಇರುವ ವೇತನ ಪಾವತಿಯ ಬಗ್ಗೆ ವರದಿ ತಯಾರಿಸಲಾಗಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಮಂಗಳೂರು: “ಕಳೆದ ರಾತ್ರಿಯಿಂದ ಮಳೆ ಬಿರುಸು ಪಡೆದಿದ್ದು, ಮಳೆ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಕ್ಕಳು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದ ವಿದ್ಯಾರ್ಥಿಗಳಿಗೆ ಇಂದು ರಜೆ ಸಾರಲಾಗಿದೆ” ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ತಿಳಿಸಿದ್ದಾರೆ. ಆದರೆ ಈಗಾಗಲೆ ಮಕ್ಕಳು ಶಾಲೆಗಳಿಗೆ ಬಂದಿದ್ದಲ್ಲಿ ಎಲ್ಲಾ ಮುಂಜಾಗೃತೆ ವಹಿಸಿ ಎಂದಿನಂತೆ ಕಾರ್ಯ ನಿರ್ವಹಿಸಲು ಹಾಗೂ ಮಕ್ಕಳು ಶಾಲೆಗೆ ಬರಲು ಅನಾನುಕುಲವಾದ ಪ್ರದೇಶದಲ್ಲಿ ಆ ಮಕ್ಕಳಿಗೆ ಒಂದು ದಿನ ರಜೆ ಸಾರುವಂತೆ ಹಾಗೂ ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಕಟ್ಟೆಚ್ಚರ ವಹಿಸುವಂರೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.ವಿದ್ಯಾರ್ಥಿಗಳು ಈಗಾಗಲೇ ಶಾಲೆಗೆ ಬಂದರೆ ಅವರನ್ನು ವಾಪಸ್ ಕಳುಹಿಸುವ ಮತ್ತು ತರಗತಿಗಳನ್ನು ಮುಚ್ಚುವ ಅಗತ್ಯವಿಲ್ಲ ಎಂದು ಡಿಸಿ ಸ್ಪಷ್ಟವಾಗಿ ಸೂಚಿಸಿದ್ದಾರೆ.ತಾಲ್ಲೂಕುಗಳಲ್ಲಿ, ತಹಶೀಲ್ದಾರ್, ಶಿಕ್ಷಣ ಅಧಿಕಾರಿಗಳಿಗೆ ಗಳಿಗೆ ಪರಿಸ್ಥಿತಿಯನ್ನು ಅವಲೋಕಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ ಎಂದು ಡಿಸಿ ತಿಳಿಸಿದ್ದಾರೆ.ಇನ್ನು ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ತೀವ್ರವಾದ ಮಳೆ ಹಿನ್ನಲೆ ರಜೆ ಘೋಷಿಸಲಾಗಿದೆ.
ಮಂಗಳೂರು:ವಿದೇಶಿ ಮೂಲದ ಹಡಗೊಂದು ಉಳ್ಳಾಲದ ಬಟಪಾಡಿ ಸಮುದ್ರದಲ್ಲಿ ಜೂ.21ರಂದು ಮುಳುಗಡೆಯಾಗಿದ್ದು, ‘ಎಂವಿ ಪ್ರಿನ್ಸೆಸ್ ಮಿರಾಲ್’ ಎಂಬ ಹೆಸರಿನ ಹಡಗಿನ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಕರಾವಳಿಯ ರಕ್ಷಣಾ ಪಡೆಗೆ ಸೇರಿದ ಮೂರು ವಿಶೇಷ ಹಡಗಲ್ಲದೆ ಡೋರ್ನಿಯರ್ ವಿಮಾನದ ಮೂಲಕವೂ ಕಣ್ಗಾವಲಿಡಲಾಗಿದೆ. ತೈಲ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸುರಕ್ಷತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.ಹಡಗಿನ ಸುತ್ತ ಈಗಾಗಲೇ ಕಣ್ಗಾವಲಿಟ್ಟಿದೆ. ಮತ್ತೊಂದೆಡೆ ಈ ಭಾಗದಲ್ಲಿ ಮೀನುಗಾರಿಯನ್ನು ಕೂಡ ನಿಷೇಧಿಸಲಾಗಿದೆ. ಹಡಗಿನಿಂದ ಇಂಧನ ಹೊರ ತೆಗೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ.
ವಿಟ್ಲ: ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಿದ್ದು ಸಾರ್ವಜನಿಕರ ಬಸ್ಸು ತಂಗುದಾಣದಲ್ಲಿ ರಕ್ತ ಪತ್ತೆಯಾಗಿರುವ ಘಟನೆ ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಿಟ್ಲ -ಪುತ್ತೂರು ರಸ್ತೆಯ ಬದನಾಜೆಯಲ್ಲಿ ನಡೆದಿದೆ.ಬದನಾಜೆ ಬಸ್ಸು ತಂಗುದಾಣದ ಪಕ್ಕದಲ್ಲಿ ಹಾಲು ಸಂಗ್ರಹಣಾ ಕೇಂದ್ರವಿದ್ದು, ಅಲ್ಲಿಗೆ ಬಂದವರು ರಕ್ತವನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇನ್ನು ಸ್ಥಳಕ್ಕಾಗಮಿಸಿದ ವಿಟ್ಲ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಾಗ ಪ್ರಕರಣದ ಸತ್ಯಾಂಶ ಬೆಳಕಿಗೆ ಬಂದಿದೆ.ನೆಲ್ಲಿಗುಡ್ಡೆ ಮೂಲದ ವ್ಯಕ್ತಿ ಕುಡಿತದ ಮತ್ತಿನಲ್ಲಿ ಬದನಾಜೆ ಬಸ್ಸು ನಿಲ್ದಾಣದಲ್ಲಿ ಕುಳಿತಿದ್ದು, ಈ ವೇಳೆ ಆ ವ್ಯಕ್ತಿ ಬಿದ್ದು ಮುಖ ಹಾಗೂ ಮೂಗಿನ ಭಾಗಕ್ಕೆ ಗಾಯವಾಗಿ ರಕ್ತ ಬಂದಿದ್ದು, ಬೆಳಗ್ಗಿನ ವೇಳೆ ಅಲ್ಲಿಂದ ಆತ ಎದ್ದು ವಿಟ್ಲ ಕಡೆಗೆ ತೆರಳಿದ್ದಾನೆ ಎಂದು ತಿಳಿದು ಬಂದಿದೆ.
ಮಂಗಳೂರು: ಇತ್ತೀಚೆಗೆ ಉಳ್ಳಾಲ ಬಟ್ಟಪ್ಪಾಡಿ ಸಮೀಪ ಸಮುದ್ರದಲ್ಲಿ ಮುಳುಗಡೆಯಾ ಹಡಗಿನಿಂದ ಸಣ್ಣ ಪ್ರಮಾಣದ ತೈಲ ಸೊರಿಕೆ ಹಿನ್ನಲೆ ಉಳ್ಳಾಲ ವಲಯ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಉಳ್ಳಾಲ ವಲಯದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಸರಕು ಸಾಗಾಟದ ಹಡಗು ಮುಳುಗಡೆಯಾಗಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಈ ಹಿನ್ನಲೆ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇನ್ನು ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಯಾರಾದರೂ ಮೀನುಗಾರಿಕೆ ನಡೆಸಿದರೆ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ
ಬೆಳ್ತಂಗಡಿ : ಮುಸ್ಲಿಂ ಸಮುದಾಯದ ಮಸೀದಿಯಲ್ಲಿರು ಕಲ್ಲನ್ನು ಶಿವಲಿಂಗಕ್ಕೆ ಹೋಲಿಸಿ ಬೆಳ್ತಂಗಡಿ ಕಾಂಗ್ರೇಸ್ ಮುಖಂಡ ವಿವಾದ ಹುಟ್ಟು ಹಾಕಿದ್ದು, ಇದೀಗ ಕಾಂಗ್ರೇಸ್ ಮುಖಂಡನ ವಿರುದ್ದ ಹಿಂದೂ ಸಂಘಟನೆಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬೆಳ್ತಂಗಡಿಯ ಕಾಜೂರು ಮಸೀದಿಗೆ ಸಂಬಂಧಿಸಿದಂತೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಜೂರು ಮಸೀದಿ ಪಕ್ಕದಲ್ಲಿ ಕಬರ್ ಸ್ತಾನಗಳು ಇದ್ದು, ಅಲ್ಲಿ ಹಾಕಿರುವ ಕಲ್ಲುಗಳನ್ನು ಹಿಂದೂ ಸಂಘಟನೆಗಳು ಶಿವಲಿಂಗ ಎಂದು ಹೇಳಬಹುದು ಆ ಕಾರಣಕ್ಕೆ ಬಿಜೆಪಿ ಸಚಿವರನ್ನು,ಜನಪ್ರತಿನಿಧಿಗಳನ್ನು,ಹಿಂದೂ ಸಂಘಟನೆಯವರನ್ನು ಮಸೀದಿ ಪಕ್ಕ ಬರಲು ಬಿಡಬೇಡಿ, ಅವರು ಬಂದಾಗ ಎಚ್ಚರದಿಂದಿರಿ ಎಂದು ಮುಸ್ಲಿಂ ಸಮುದಾಯಕ್ಕೆ ಎಚ್ಚರಿಸಿದ್ದಾರೆ. ಇದೀಗ ಬೆಳ್ತಂಗಡಿ ಕಾಂಗ್ರೇಸ್ ಮುಖಂಡ ಸಲೀಂ ಶಿವಲಿಂಗಕ್ಕೆ ಅವಹೇಳನ ಮಾಡಿದ ಹಿನ್ನಲೆ ಸಲೀಂ ವಿರುದ್ಧ ಪೋಲೀಸರಿಗೆ ದೂರು ನೀಡಲಾಗಿದೆ. ಸ್ಥಳೀಯ ವಿಶ್ವಹಿಂದೂ ಪರಿಷತ್ ನಿಂದ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.
ತೀವ್ರ ಶ್ವಾಸಕೋಶದ ಸೋಂಕಿನ ಸಮಸ್ಯೆಯಿಂದ ಚೆನ್ನೈನ ಖಾಸಗಿ ಆಸ್ಪತ್ರೆಗೆ ವಿದ್ಯಾ ಸಾಗರ್ ಅವರು ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಮಂಗಳವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಆಸ್ಪತ್ರೆಯ ಮೂಲಗಳ ಪ್ರಕಾರ ವಿದ್ಯಾಸಾಗರ್ ಅವರು ಕಳೆದ ಕೆಲವು ವರ್ಷಗಳಿಂದ ಶ್ವಾಸಕೋಸ ಸಮಸ್ಯೆಯಿಂದ ಬಳಲುತ್ತಿದ್ದರು. ಪಾರಿವಾಳದ ಹಿಕ್ಕೆಗಳಲ್ಲಿರುವ ಸೋಂಕಿತ ಗಾಳಿಯನ್ನು ಉಸಿರಾಡುವ ಮೂಲಕ ಉಂಟಾಗುವ ಅಲರ್ಜಿಯಾಗಿದೆ. ಈ ವರ್ಷದ ಜನವರಿಯಲ್ಲಿ ಮೀನಾ ಅವರ ಇಡೀ ಕುಟುಂಬ ಕೋವಿಡ್ 19 ಸೋಂಕಿಗೆ ಒಳಗಾದಾಗ ವಿದ್ಯಾಸಾಗರ್ ಅವರಿಗೆ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಗಂಭೀರವಾಗಿದೆ. ವಿದ್ಯಾಸಾಗರ್ ಅವರು ಕರೊನಾ ಸ್ಥಿತಿಯಿಂದ ಚೇತರಿಸಿಕೊಂಡಿದ್ದರೂ, ನಂತರ ಶ್ವಾಸಕೋಸದ ಸಮಸ್ಯೆ ಇನ್ನಷ್ಟು ಹದಗೆಟ್ಟಿತು ಎಂದು ಹೇಳಲಾಗುತ್ತದೆ. ಕೆಲವು ವಾರಗಳ ಹಿಂದೆ ವೈದ್ಯರು, ವಿದ್ಯಾಸಾಗರ್ ಅವರ ಶ್ವಾಸಕೋಶವನ್ನು ಕಸಿ ಮಾಡಲು ನಿರ್ಧರಿಸಿದ್ದರು. ಆದರೆ, ದಾನಿಯನ್ನು ಪಡೆಯುವಲ್ಲಿ ತೊಂದರೆ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಏಕೆಂದರೆ ಮಿದುಳು ಸತ್ತ ರೋಗಿಗಳಿಂದ ಮಾತ್ರ ಶ್ವಾಸಕೋಸ ಕಸಿ ಬೇಕಾದನ್ನು ಪಡೆಯಲು ಸಾಧ್ಯ. ಆದರೆ, ಅದಕ್ಕೆ ಕಾಯುತ್ತಿರುವವರ ಪಟ್ಟಿಯೂ ಕೂಡ ದೊಡ್ಡದಾಗಿದೆ.…