ಉಡುಪಿ: ಕುತೂಹಲಕಾರಿ ಘಟನೆಯೊಂದನ್ನು ಜಿಲ್ಲಾ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಯುವಕನಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ವರುಣ್ ನಾಯಕ್(25) ನ್ಯಾಯಾಂಗ ಬಂಧನಕ್ಕೆ ಒಳಗಾದ ವ್ಯಕ್ತಿ. ಜೂನ್ 26ರಂದು ವರುಣ್ ಭಯದ ಧ್ವನಿಯಲ್ಲಿ ತನ್ನ ಪೋಷಕರಿಗೆ ಕರೆ ಮಾಡಿ ತನ್ನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾರೆ ಎಂದು ತಿಳಿಸಿದ್ದ. ಅಪಹರಣಕಾರರು 5 ಲಕ್ಷ ರೂ. ಬೇಡಿಕೆ ಇಟ್ಟಿದ್ದ ಎಂದು ತಿಳಿಸಿದ್ದ. ಈ ಹಿನ್ನೆಲೆಯಲ್ಲಿ ಪೋಷಕರು ಆತಂಕಗೊಂಡು ಉಡುಪಿ ಪೊಲೀಸರಿಗೆ ದೂರು ನೀಡಿದ್ದರು. ಅಪಹರಣ ಕುರಿತಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ನಡುವೆ ವರುಣ್ ಆಗಾಗ್ಗೆ ತನ್ನ ಪೋಷಕರೊಂದಿಗೆ ವಾಟ್ಸಾಪ್ ಚಾಟ್‌ಗಳ ಮೂಲಕ ಸಂಪರ್ಕದಲ್ಲಿರುತ್ತಿದ್ದ. ಅವನ ತಾಯಿ ಕೊನೆಗೆ ಫೋನ್ ಕರೆಯಲ್ಲಿ ಮಾತನಾಡಲು ಅವನನ್ನು ಒಪ್ಪಿಸಿದರು. ವರುಣ್ ತನ್ನ ಪೋಷಕರಿಗೆ ಕರೆ ಮಾಡಿದಾಗ, ಎಚ್ಚೆತ್ತ ಪೊಲೀಸರು ಫೋನ್ ಕರೆ ಸ್ಥಳವನ್ನು ಟ್ರ್ಯಾಕ್ ಮಾಡಿದ್ದಾರೆ. ಯುವಕನ ಮೊಬೈಲ್ ಲೊಕೇಷನ್ ಪತ್ತೆ ಮಾಡುವಾಗ ಅದು ಗೋವಾದಲ್ಲಿರುವುದು ಗೊತ್ತಾಗಿದೆ ಕೂಡಲೇ ಗೋವಾಕ್ಕೆ ಇಬ್ಬರು ಸಿಬ್ಬಂದಿಗಳನ್ನು…
Author: main-admin
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಮಂಗಳವಾರ ರಿಲಯನ್ಸ್ ಜಿಯೋ ಮುಖ್ಯಸ್ಥ ಸ್ಥಾನದಿಂದ ಕೆಳಕ್ಕೆ ಇಳಿದಿದ್ದು, ಪುತ್ರ ಆಕಾಶ್ ಅಂಬಾನಿ ನೂತನ ಮುಖ್ಯಸ್ಥರಾಗಿದ್ದಾರೆ. ಅಂಬಾನಿಯವರ ಪುತ್ರ ಆಕಾಶ್ ಅಂಬಾನಿಯವರನ್ನು ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಮಾಹಿತಿ ನೀಡಿದೆ. ಜೂನ್ 27ರಿಂದ ಪಂಕಜ್ ಮೋಹನ್ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಜೂನ್ 27ರಂದು ನಡೆದ ಜಿಯೋ ಸಮಿತಿ ಸಭೆಯ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ವರದಿಯು ಉಲ್ಲೇಖ ಮಾಡಿದೆ. ಇನ್ನು ಪಂಕಜ್ ಮೋಹನ್ ವ್ಯವಸ್ಥಾಪಕ ನಿರ್ದೇಶಕರಾಗಿ ಐದು ವರ್ಷಗಳ ಕಾಲ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸ್ವತಂತ್ರ ವ್ಯವಸ್ಥಾಪಕರಾಗಿ ಐದು ವರ್ಷಗಳ ಅವಧಿಗೆ ರಾಮಿಂದರ್ ಸಿಂಗ್ ಗುರ್ಜಲ್ ಹಾಗೂ ಕೆವಿ ಔಧರಿರನ್ನು ನೇಮಕ ಮಾಡಲಾಗಿದೆ. ಇದು ಕೂಡಾ ಜೂನ್ 27ರಿಂದ ಜಾರಿಗೆ ಬರಲಿದೆ. ಆಕಾಶ್ ಅಂಬಾನಿ ಯಾರು? ಮುಕೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಈ ಹಿಂದೆ ರಿಲಯನ್ಸ್ ಜಿಯೋ ನಾನ್ ಎಕ್ಸಿಕ್ಯುಟಿವ್ ಡೈರೆಕ್ಟರ್ ಆಗಿದ್ದರು. ಈಗ ನೂತನ ಮುಖ್ಯಸ್ಥರಾಗಿ ಆಯ್ಕೆ…
ಮುಂಬೈ (ಮಹಾರಾಷ್ಟ್ರ): ಏಳು ಪ್ರಯಾಣಿಕರು ಮತ್ತು ಇಬ್ಬರು ಪೈಲಟ್‌ಗಳನ್ನು ಹೊತ್ತ ಹೆಲಿಕಾಪ್ಟರ್ ಮುಂಬೈ ಹೈನಲ್ಲಿರುವ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ ಲಿಮಿಟೆಡ್ (ONGC) ರಿಗ್ ಬಳಿ ಸಾಗರ್ ಕಿರಣ್ ಬಳಿ ಇಂದು ಅರಬ್ಬಿ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಕಂಪನಿ ಹೇಳಿದೆ. ಈ ಘಟನೆ ನಡೆದಿರುವ ಸ್ಥಳವು ಮುಂಬೈನಿಂದ ಅರಬ್ಬಿ ಸಮುದ್ರದೊಳಗೆ 7 ನಾಟಿಕಲ್ ಮೈಲಿ ದೂರದಲ್ಲಿದೆ. ಇದುವರೆಗೆ ಒಟ್ಟು ಆರು ಮಂದಿಯನ್ನು ರಕ್ಷಿಸಲಾಗಿದ್ದು, ಉಳಿದವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ ಎಂದು ಒಎನ್‌ಜಿಸಿ ತಿಳಿಸಿದೆ. ಅಧಿಕೃತ ಮೂಲಗಳ ಪ್ರಕಾರ ಭಾರತೀಯ ಕೋಸ್ಟ್ ಗಾರ್ಡ್ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಕೋಸ್ಟ್ ಗಾರ್ಡ್ ಎರಡು ಹಡಗುಗಳನ್ನು ಸ್ಥಳದ ಕಡೆಗೆ ತಿರುಗಿಸಿದೆ. ದಮನ್‌ನಿಂದ ಟೇಕಾಫ್ ಆದ ಡಾರ್ನಿಯರ್ ವಿಮಾನವು ಒಂದು ಲೈಫ್ ರಾಫ್ಟ್ ಅನ್ನು ಈ ಪ್ರದೇಶದಲ್ಲಿ ಬೀಳಿಸಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕುಂದಾಪುರ: ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ವೈಯಕ್ತಿಕ ಕಾರಣದಿಂದ ಮನನೊಂದು ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದಲ್ಲಿ ನಿನ್ನೆ ಈ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.ಮೃತರನ್ನು ಪಾರಂಪಳ್ಳಿ ನಿವಾಸಿ ಸಯ್ಯದ್ ಬ್ಯಾರಿ ಎಂಬವರ ಮಗಳು ಮಿಸ್ರಿಯಾ(19) ಎಂದು ಗುರುತಿಸಲಾಗಿದೆ. ಕುಂದಾಪುರ ಬ್ಯಾರೀಸ್ ಕಾಲೇಜಿನಲ್ಲಿ ದ್ವಿತೀಯ ಪಿ.ಯು.ಸಿ. ವ್ಯಾಸಂಗ ಮಾಡುತ್ತಿದ್ದ ಈಕೆ ತಲೆನೋವು ಎಂದು ಕೋಣೆಗೆ ಹೋಗಿ ಮಲಗಿದ್ದಳು. ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯ:ಸುಳ್ಯದ ಗೂನಡ್ಕ, ಪೆರಾಜೆ, ಕಲ್ಲುಗುಂಡಿ, ಅರಂತೋಡು, ಜಾಲ್ಸೂರು ಭಾಗದಲ್ಲಿ ಮತ್ತೆ ಭೂ ಕಂಪನದ ಅನುಭವವಾಗಿದೆ. ಇದರಿಂದಾಗಿ ಮತ್ತೆ ಜನರಲ್ಲಿ ಆತಂಕ ಶುರುವಾಗಿದೆ. ಎರಡು ದಿನಗಳ ಹಿಂದೆಯಷ್ಟೆ ಕೊಡಗು ದಕ್ಷಿಣ ಕನ್ನಡ ಗಡಿ ಪ್ರದೇಶ ಸೇರಿ ಇದೇ ಭಾಗದಲ್ಲಿ ಭೂ ಕಂಪನ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 2.7ರಷ್ಟು ದಾಖಲಾಗಿತ್ತು. ಇಂದು ಬೆಳಿಗ್ಗೆ 7.45 ರ ವೇಳೆಗೆ ಮತ್ತೆ ಭೂಮಿ ಕಂಪಿಸಿದೆ.ತಾಲೂಕಿನ ಬಹುತೇಕ ಕಡೆ ಶಬ್ದದೊಂದಿಗೆ ಎರಡು ಮೂರು ಸೆಕೆಂಡುಗಳಷ್ಟು ಕಂಪಿಸಿದೆ. ಯಾವುದೇ ಅಪಾಯದ ಬಗ್ಗೆ ತಿಳಿದು ಬಂದಿಲ್ಲ.
ಬೆಳ್ತಂಗಡಿ : ಸ್ಕೂಟರ್ ನಲ್ಲಿ ಹೋಗುತ್ತಿದ್ದ ವಿವಾಹಿತ ಮಹಿಳೆಯನ್ನು ಆಟೋ ಚಾಲಕನೊಬ್ಬ ನಡುರಸ್ತೆಯಲ್ಲಿ ಸ್ಕೂಟರ್ ಅಡ್ಡಹಾಕಿ ಚೂರಿಯಿಂದ ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚಾರ್ಮಾಡಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಸೋಮವಾರ ಸಂಜೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಬಂಟ್ವಾಳ ಗ್ರಾಮದ ಅನಂತಾಡಿ ನಿವಾಸಿ ಮಹಿಳೆ ಶಕುಂತಾಳ(35) ವಿಟ್ಲ ಸಮೀಪದ ಮಾಣಿಯ ನೇರಳಕಟ್ಟೆಯಲ್ಲಿ ಚೂರಿಯಿಂದ ಇರಿದು ಕೊಲೆ ಮಾಡಿದ ಬಳಿಕ ಆಟೋದಲ್ಲಿ ಬೆಳ್ತಂಗಡಿ ಮೂಲಕ ಚಾರ್ಮಾಡಿ ಘಾಟ್ ಮೂಲಕ ಚಿಕ್ಕಮಗಳೂರು ಕಡೆಗೆ ಪರಾರಿಯಾಗುತ್ತಿದ್ದ ಕೊಲೆ ಮಾಡಿದ ಆರೋಪಿ ಆಟೋ ಚಾಲಕ ಶ್ರೀಧರ್ ಎಂಬತನನ್ನು ವಿಟ್ಲ ಪೊಲೀಸರ ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡ ಘಟನೆ ನಡೆದ ಮೂರು ಘಟನೆಯೊಳಗೆ ಚಾರ್ಮಾಡಿಯ ಚೆಕ್ ಪೋಸ್ಟ್ ಬಳಿ ಆಟೋ ಸಮೇತ ವಶಕ್ಕೆ ಪಡೆದು ವಿಟ್ಲ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ದಕ್ಷ ಪಿಎಸ್ಐ ಕೃಷ್ಣಕಾಂತ್ ಪಾಟೀಲ್ ಮತ್ತು ತಂಡದ ಮಹಮ್ಮದ್ ಅಸ್ಲಾಂ, ಪ್ರಶಾಂತ್, ಟ್ರಾಫಿಕ್ ಸಿಬ್ಬಂದಿ ಪ್ರವೀಣ್, ಚಾಲಕರಾದ…
ವಿಟ್ಲ: ಮಹಿಳೆಯ ಮೇಲೆ ಯುವಕೋರ್ವ ಚೂರಿ ಇರಿದು ಪರಾರಿಯಾದ ಘಟನೆ ನಡೆದಿದೆ. ವಿಟ್ಲದ ಜನಪ್ರಿಯ ಗಾಡರ್ನ್ ಬಳಿ ಈ ಘಟನೆ ನಡೆದಿದೆ. ಅನಂತಾಡಿ ದೇವಿನಗರ ನಿವಾಸಿ ಶಕುಂತಲಾ ಎಂಬ ಮಹಿಳೆಯ ಮೇಲೆ ಹಲ್ಲೆ ಮಾಡಲಾಗಿದೆ. ಚೂರಿ ಇರಿತದಿಂದ ಮಹಿಳೆಗೆ ಗಂಭೀರ ಗಾಯಗಳಾಗಿದೆ. ಸ್ಥಳೀಯರು ಗಾಯಾಳು ಮಹಿಳೆಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಶಕುಂತಲಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಗಂಡ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದಾರೆ. ಚೂರಿ ಇರಿತಕ್ಕೆ ಕಾರಣ ಯಾವುದೆಂದು ತಿಳಿದು ಬಂದಿಲ್ಲ. ಹಲ್ಲೆಗೈದ ಯುವಕ ಪೆರಾಜೆ ಕಡೆ ಓಡಿ ಹೋಗಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, 16 ಐಪಿಎಸ್ ಅಧಿಕಾರಿಗಳನ್ನು ( IPS Officer Transfer ) ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಈ ಕುರಿತಂತೆ ಆದೇಶ ಹೊರಡಿಸಿರುವಂತ ರಾಜ್ಯ ಸರ್ಕಾರವು, ಬೆಂಗಳೂರು ಆಗ್ನೇಯ ವಿಭಾಗದ ಡಿಸಿಪಿಯಾಗಿರುವಂತ ಜೋಷಿ ಶ್ರೀನಾಥ್ ಮಹದೇವ್ ಅವರನ್ನು ವರ್ಗಾವಣೆ ಮಾಡಿ, ಕರ್ನಾಟಕ ಲೋಕಾಯುತ್ತದ ಎಸ್ಪಿಯಾಗಿ ನೇಮಿಸಲಾಗಿದೆ. ಇನ್ನೂ ಬೆಂಗಳೂರು ಸಂಚಾರ ಪೊಲೀಸ್ ನ ಪೂರ್ವ ಡಿಸಿಪಿ ಕೆ.ಎಂ ಶಾಂತರಾಜು ಅವರನ್ನು ಬೆಸ್ಕಾಂ ಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಸ್ಥಳ ನಿಯುಕ್ತಿಯ ನಿರೀಕ್ಷೆಯಲ್ಲಿದ್ದಂತ ಸಿ ಕೆ ಬಾಬು ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಡಿಸಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಬೆಂಗಳೂರು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಎಂ ಪಾಟೀಲ್ ಅವರನ್ನು ಬೆಳಗಾವಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿದೆ. ಸೆಂಟ್ರಲ್ ವಿಭಾಗದ ಎಸಿಪಿಯ ಎಸ್ಪಿ ಶ್ರೀಮತಿ ಕಲಾ ಕೃಷ್ಣಮೂರ್ತಿಯವರನ್ನು ಪಶ್ಚಿಮ ವಿಭಾಗದ ಸಂಚಾರಿ ಪೊಲೀಸ್ ಠಾಣೆಯ ಡಿಸಿಪಿಯಾಗಿ ನೇಮಿಸಲಾಗಿದೆ.
ಉಡುಪಿ: ನ್ಯಾಯಾಲಯದ ಮೆಟ್ಟಿಲು ಹತ್ತಲಾಗದ ವೃದ್ಧೆಯ ಬಳಿ ಖುದ್ದು ನ್ಯಾಯಾಧೀಶರೇ ಹಾಜರಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯಲ್ಲಿ ಲೋಕ ಅದಾಲತ್ ವಿಚಾರಣೆಯ ವೇಳೆ ಈ ಒಂದು ಭಾವಪೂರ್ಣ ಘಟನೆ ನಡೆದಿದೆ. 2011ರ ಕೇಸ್ ಒಂದರಲ್ಲಿ 81 ವರ್ಷದ ದೇವಕಿ ಶೆಡ್ತಿ ಕಕ್ಷಿದಾರರಾಗಿದ್ದರು. ಆರೋಗ್ಯ ತೀರಾ ಹದಗೆಟ್ಟು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದರು. ನ್ಯಾಯಾಲಯದಲ್ಲಿ ಕೇಸು ಮುಂದುವರಿಸಲು ಮಗಳಿಗೆ ಜಿಪಿಎ ನೀಡಿದ್ದರು. ಈ ಬಗ್ಗೆ ಖಚಿತ ಪಡಿಸಲು ದೇವಕಿ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ನ್ಯಾಯಾಲಯದ ಆವರಣದವರೆಗೆ ರಿಕ್ಷಾದಲ್ಲೇ ಅವರು ಬಂದಿದ್ದರು. ಆದರೆ ಕೋರ್ಟ್ ಮೆಟ್ಟಿಲು ಹತ್ತಲಾಗದೆ ಅಸಹಾಯಕರಾಗಿ ಆಟೋದಲ್ಲೇ ಕುಳಿತಿದ್ದರು. ಈ ವಿಷಯ ತಿಳಿದು ಕೂಡಲೇ ನ್ಯಾಯಾಧೀಶ ಜೀತು ಎಸ್.ಆರ್ ಖುದ್ದು ವೃದ್ದೆಯ ಬಳಿ ಬಂದು ವಿಚಾರಿಸಿದರು. ಜಿಪಿಎ ನೀಡಿದ್ದರ ಬಗ್ಗೆ ದೇವಕಿ ಶೆಟ್ಟಿ ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ಅವರ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಮಂಗಳೂರು: ಬೆಂಗಳೂರು ಸಂಪರ್ಕಿಸುವ ರಾ. ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ರಸ್ತೆ ದುರಸ್ತಿ ಕಾಮಗಾರಿಗೆ 4 ತಿಂಗಳು ಸಂಚಾರ ಬಂದ್ ಮಾಡುವಂತೆ ಕಾಮಗಾರಿ ಟೆಂಡರ್ ವಹಿಸಿರುವ ಸಂಸ್ಥೆಯು ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾಡಳಿತಕ್ಕೆ ಬೇಡಿಕೆ ಮಂಡಿಸಿದೆ. ಮಾರನಹಳ್ಳಿ- ಸಕಲೇಶಪುರ ರಸ್ತೆ ತಿರುವುಗಳನ್ನು ಹೊಂದಿದ್ದು, ದುರಸ್ತಿಗೆ ರಸ್ತೆ ಬಂದ್ ಮಾಡುವುದು ತೀರಾ ಅಗತ್ಯ ಎಂದು ಗುತ್ತಿಗೆದಾರರರು ಪ್ರತಿಪಾದಿಸಿದ್ದಾರೆ. ಸದ್ಯಕ್ಕೆ ರಸ್ತೆಯನ್ನು ಮುಚ್ಚುವ ಚಿಂತನೆ ಇಲ್ಲ. ಅಧಿಕಾರಿಗಳು, ತಂತ್ರಜ್ಞರ ಜತೆ ಜಂಟಿ ಸರ್ವೇ ನಡೆಸಿ ಯಾವ ರೀತಿಯಲ್ಲಿ ರಸ್ತೆಯನ್ನು ದುರಸ್ತಿ ಮಾಡಬಹುದು ಎಂಬ ಬಗ್ಗೆ ಶೀಘ್ರ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.