ಕಾರ್ಕಳ: ಆಯತಪ್ಪಿ ಬಾವಿಗೆ ಬಿದ್ದ ಮಹಿಳೆಯನ್ನು ಕಾರ್ಕಳ ಅಗ್ನಿಶಾಮಕ ದಳದ ತಂಡ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ ಘಟನೆ ಉಡುಪಿ ಜಿಲ್ಲೆಯ ಕಾಕರ್ಳದಲ್ಲಿ ನಡೆದಿದೆ. ಕಾರ್ಕಳ ತಾಲೂಕು ಕಚೇರಿ ಸಮೀಪದ ಬಂಗ್ಲೆಗುಡ್ಡೆ ಕೆಎಂಇಎಸ್ ಶಾಲೆ ಎದುರಿನ ನಿವಾಸಿ 33 ವರ್ಷದ ನಸೀಬಾ ಬಾನು ಬಾವಿಗೆ ರಕ್ಷಣೆಗೆ ಒಳಪಟ್ಟ ಮಹಿಳೆಯಾಗಿದ್ದಾರೆ. ಇವರು ಗುರುವಾರ ಸಂಜೆ 5 ಗಂಟೆ ಸುಮಾರಿಗೆ ತಮ್ಮ ಮನೆಯ ಪಕ್ಕದ ಬಾವಿಗೆ ಬಳಿ ತೆರಳಿದಾಗ ಆಯತಪ್ಪಿ ಬಾವಿಗೆ ಬಿದಿದ್ದು ಅವರ ಗಂಡ ಹುಸೇನ್ ಎಂಬವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ತಿಳಿಸಿದ್ದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದ್ದಾರೆ. ಬಾವಿಗೆ ಬಿದ್ದ ನಸೀಬಾ ಬಾನು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಲ್ಬರ್ಟ್ ಮೋನಿಸ್, ಸಿಬ್ಬಂದಿಗಳಾದ ಅಚ್ಯುತ ಕೆ, ಜಯ ಮೂಲ್ಯ, ಕೇಶವ, ಸುರೇಶ್ ಕುಮಾರ್, ಮಹಮ್ಮದ್ ರಫೀಕ್, ಸುಜಯ್, ವಿನಾಯಕ ಪಾಲ್ಗೊಂಡಿದ್ದರು.
Author: main-admin
ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎರಡು ದಿನ ಮದ್ಯದಂಗಡಿಗಳು ಬಾಗಿಲು ಹಾಕಿದ್ದಕ್ಕೆ ಸರ್ಕಾರಕ್ಕೆ ಅಂದಾಜು 150 ಕೋಟಿ ರೂ. ನಷ್ಟವಾಗಿದೆ. ಅಬಕಾರಿ ಇಲಾಖೆಗೆ ಮದ್ಯಮಾರಾಟದಿಂದ ಪ್ರತಿದಿನ 60-70 ಕೋಟಿ ರೂ. ಆದಾಯ ಬರುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ತುಸು ಹೆಚ್ಚು ಆದಾಯ ಬರುತ್ತಿತ್ತು. ಆದರೆ ಮತದಾನ ಹಿನ್ನೆಲೆಯಲ್ಲಿ ಮೇ. 8 ರ ಸಂಜೆ ಗಂಟೆಯಿಂದ ಮೇ.11 ರ ಬೆಳಗ್ಗೆ 11ಗಂಟೆಯವರೆಗೆ ಮದ್ಯದಂಗಡಿ ಬಂದ್ ಮಾಡುವಂತೆ ಚುನಾವಣಾ ಆಯೋಗ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮದ್ಯದಂಗಡಿಗಳು ಬಂದ್ ಆಗಿದ್ದವು. ಶನಿವಾರ ಮತ ಎಣಿಕೆ ನಡೆಯುವ ಹಿನ್ನೆಲೆಯಲ್ಲಿ ಮೇ. 13 ರ ಬೆಳಗ್ಗೆ 6 ಗಂಟೆಯಿಂದ ಮೇ. 14ರ ಮುಂಜಾನೆ 6 ಗಂಟೆಯವರೆಗೆ ಮದ್ಯದಂಗಡಿಗಳು ಮತ್ತೆ ಬಂದ್ ಆಗಲಿವೆ.
ಕಾಪು: ಭಾರೀ ಗಾಳಿ ಮಳೆಯಿಂದಾಗಿ ರಸ್ತೆ ಬದಿಯ ಮರವೊಂದು ಚಲಿಸುತ್ತಿದ್ದ ರಿಕ್ಷಾದ ಮೇಲೆ ಬಿದ್ದ ಪರಿಣಾಮ ಇಬ್ಬರು ಪ್ರಯಾಣಿಕರು ಮೃತಪಟ್ಟ ಘಟನೆ ಮಜೂರು ಮಸೀದಿ ಬಳಿ ಇಂದು ರಾತ್ರಿ ವೇಳೆ ನಡೆದಿದೆ. ಮೃತರನ್ನು ಶಿರ್ವ ಶಾಂತಿಗುಡ್ಡೆಯ ಪುಷ್ಪಾ(45) ಹಾಗೂ ಅವರ ಮೈದುನ ಎಂದು ಗುರುತಿಸಲಾಗಿದೆ. ಕಾಪು ಕಡೆಯಿಂದ ಶಿರ್ವ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಶರೀಫ್ ಎಂಬವರ ರಿಕ್ಷಾ ಮತ್ತು ಶಿರ್ವ ಕಡೆಯಿಂದ ಕಾಪು ಕಡೆಗೆ ಬರುತ್ತಿದ್ದ ದಿನೇಶ್ ಎಂಬವರ ರಿಕ್ಷಾದ ಮೇಲೆ ಮರ ಬಿತ್ತೆನ್ನಲಾಗಿದೆ. ಇದರಿಂದ ಎರಡೂ ರಿಕ್ಷಾಗಳು ಸಂಪೂರ್ಣ ಜಖಂಗೊಂಡಿದ್ದು, ಈ ಎರಡು ರಿಕ್ಷಾಗಳ ಚಾಲಕರು ಅಪಾಯದಿಂದ ಪಾರಾದರು. ಶರೀಫ್‌ನ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ರಿಕ್ಷಾದೊಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟರು. ಸುಮಾರು ಒಂದೂವರೆ ಗಂಟೆಗಳ ಕಾರ್ಯಾಚರಣೆ ಬಳಿಕ ರಿಕ್ಷಾದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಮೃತದೇಹವನ್ನು ಹೊರಗೆ ತೆಗೆಯಲಾಯಿತು. ಸ್ಥಳದಲ್ಲಿ ಕಾಪು ಪೊಲೀಸರು ಹಾಜರಿದ್ದರು.
ಮಂಗಳೂರು:ಮೂಡುಶೆಡ್ಡೆಯಲ್ಲಿ ಬುಧವಾರ ಸಂಜೆ ನಡೆದ ಗಲಭೆಗೆ ಕಾಂಗ್ರೆಸ್ ಅಭ್ಯರ್ಥಿಯೇ ನೇರ ಕಾರಣ. ಅಭ್ಯರ್ಥಿಯಾದವರು ಕಾರ್ಯಕರ್ತರನ್ನು ತಡೆಯುವ ಪ್ರಯತ್ನ ಮಾಡಬೇಕೇ ಹೊರತು, ಗಲಭೆಗೆ ಪ್ರೇರಣೆ ನೀಡಬಾರದು. ಚುನಾವಣೆಯಲ್ಲಿ ಸೋಲುವ ಭಯದಿಂದ ಹತಾಷರಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಮೂಡುಬಿದಿರೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ. ಗುರುವಾರ ನಗರದ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂಡುಶೆಡ್ಡೆಯಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ಜತೆಯಾಗಿ ಬಲಿಷ್ಠವಾಗಿದೆ. ಬಿಜೆಪಿ ಕಾರ್ಯಕರ್ತರು ಕುಳಿತಿದ್ದ ಚುನಾವಣ ಕೌಂಟರ್ ಬಳಿಗೆ ಬಂದು ಕಾರು ನಿಲ್ಲಿಸಿರುವುದು ಅವರು ಮಾಡಿದ ದೊಡ್ಡ ತಪ್ಪು ಎಂದರು. ಸಂಯಮ ವಹಿಸಿ ಕಾಂಗ್ರೆಸ್ ಪಕ್ಷದವರು ಇದ್ದಲ್ಲೇ ಕಾರು ನಿಲ್ಲಿಸಿದ್ದಲ್ಲಿ ಗಲಭೆಗೆ ಆಸ್ಪದವೇ ಇರಲಿಲ್ಲ. ದಿನವಿಡೀ ಅವರು ನೂರಾರು ಬೂತ್‌ಗಳಿಗೆ ಅವರು ಭೇಟಿ ನೀಡಿದ್ದಾರೆ. ಅಲ್ಲಿಯೂ ಬಿಜೆಪಿ ಕೌಂಟರ್‌ಗಳಿತ್ತು. ಅಲ್ಲಿ ಯಾಕೆ ಗಲಭೆ ನಡೆದಿಲ್ಲ ಎಂದು ಪ್ರಶ್ನಿಸಿದರು.
ಪುತ್ತೂರು: ಮೇ 10 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಮೇ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದ.ಕ ಜಲ್ಲೆಯಲ್ಲಿ 144 ಸೆಕ್ಷನ್ ಜಾರಿಗೊಳಿಸಿ ದ.ಕ ಜಿಲ್ಲಾಧಿಕಾರಿ ಎಮ್ ಆರ್ ರವಿ ಕುಮಾರ್ ಆದೇಶ ಹೊರಡಿಸಿದ್ದಾರೆ. ಮೇ 13 ಬೆಳಗ್ಗೆ 5 ರಿಂದ ರಾತ್ರಿ 12 ರವರೆಗೆ ಈ ಆದೇಶ ಜಾರಿಯಲ್ಲಿರಲಿದೆ. ಶವ ಸಂಸ್ಕಾರ, ಮದುವೆ ಅಥವಾ ಧಾರ್ಮಿಕ ಮೆರವಣಿಗೆಗಳಿಗೆ ಹಾಗೂ ಕೋವಿಡ್ 19 ಕಾರ್ಯಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ನಿಷೇದಾಜ್ಞೆ ವಿಧಿಸಿ ಆದೇಶ ಹೊರಡಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಗಳೂರು: ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದು, ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬಜ್ಪೆ, ಕಾವೂರು, ಮೂಡುಬಿದಿರೆ, ಸುರತ್ಕಲ್ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೇ 14 ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ ಎಂದು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅಂಶುಕುಮಾರ್ ತಿಳಿಸಿದ್ದಾರೆ. ಬುಧವಾರ (ಮೇ 10) ತಡರಾತ್ರಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದ್ದು, ಕಲ್ಲು ತೂರಾಟ ನಡೆದಿದೆ. ಮೂಡುಶೆಡ್ಡೆಯಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಮಿಥುನ್ ರೈ ಅವರ ವಾಹನ ಹಾದು ಹೋಗುವ ವೇಳೆ ಪ್ರಧಾನಿ ಮೋದಿ ಪರವಾಗಿ ಘೋಷಣೆ ಕೂಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಪರ ಘೋಷಣೆ ಕೂಗಿದ್ದು, ಈ ವೇಳೆ ಘರ್ಷಣೆ ಶುರುವಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ. ಇದೀಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್…
ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅನಾರೋಗ್ಯದಿಂದ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರ ಆರೋಗ್ಯದಲ್ಲಿ ಬುಧವಾರ (ಮೇ 10) ಮಧ್ಯರಾತ್ರಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿ.ಟಿ ರವಿ ಅವರಿಗೆ ಕಿಡ್ನಿಯಲ್ಲಿ ಕಲ್ಲು ಕಾಣಿಸಿಕೊಂಡಿತ್ತು. ಕಳೆದ 15 ದಿನಗಳಿಂದಲೂ ಆಸ್ಪತ್ರೆ ಸೇರಿದ್ದ ಅವರು, ಲಿಂಗಾಯತ ಸಮಾವೇಶಕ್ಕೂ ಗೈರಾಗಿ, ವೀಡಿಯೋ ಮೂಲಕ ಮತಯಾಚನೆ ಮಾಡಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ಚಿಕಿತ್ಸೆಗಾಗಿ ಮತ್ತೆ ಆಸ್ಪತ್ರೆ ಸೇರಿದ್ದಾರೆ.
ಮಂಗಳೂರು: ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಜಟಾಪಟಿ-ಕೈ ಅಭ್ಯರ್ಥಿ ಮಿಥುನ್ ರೈ ಕಾರ್‌ಗೆ ಹಾನಿ ಮಂಗಳೂರು: ಮಂಗಳೂರು ನಗರದ ಹೊರವಲಯದ ವಾಮಂಜೂರು ಸಮೀಪದ ಮೂಡುಶೆಡ್ಡೆಯಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಜಟಾಪಟಿ ನಡೆದಿರುವ ಘಟನೆ ನಡೆದಿದೆ. ಈ ವೇಳೆ ಕೈ ಅಭ್ಯರ್ಥಿ ಮಿಥುನ್ ರೈ ಕಾರ್‌ಗೆ ಹಾನಿ ನಡೆದಿದೆ. ಮತದಾನ ಪ್ರಕ್ರಿಯೆ ಮುಗಿದ ಬಳಿಕ ಸ್ಥಳಕ್ಕೆ ಮುಲ್ಕಿ-ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮೂಡುಶೆಡ್ಡೆಗೆ ಆಗಮಿಸಿದ್ದರು. ಈ ವೇಳೆ ಅಲ್ಲಿ ಬಿಜೆಪಿ ಪರ ಘೋಷಣೆ ಕೇಳಿ ಬಂದಿದೆ. ಆಗ ಸ್ಥಳದಲ್ಲಿದ್ದ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು ಘರ್ಷಣೆ ಉಂಟಾಗಿದೆ. ಪರಿಣಾಮ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿಕೊಂಡಿದ್ದಾರೆ. ಈ ಘರ್ಷಣೆಯಲ್ಲಿ ಮಿಥುನ್ ರೈ ಕಾರಿಗೆ ಹಾನಿ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರ ಭೇಟಿ ನೀಡಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ಉಳ್ಳಾಲ: ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಇಂದು ಬೆಳಗ್ಗೆ ಅರಂಭಗೊಂಡಿತು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಇಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಕೋಟೆಕಾರು ವಾರ್ಡಿನ ಕೋಟೆಕಾರು ಪಟ್ಟಣ ಪಂಚಾಯತ್ ಮತಗಟ್ಟೆಯಲ್ಲಿ ಮತದಾನಗೈದರು.
ಮಂಗಳೂರು: 2023ರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ ಸಂಜೆ 5ಗಂಟೆವರೆಗೆ ಕ್ರಮವಾಗಿ 68.93% ಮತ್ತು 73.75%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ. ಬೈಂದೂರು – 71.83%,ಕುಂದಾಪುರ – 75.61%, ಉಡುಪಿ -71.26%, ಕಾಪು – 71.16%,ಕಾರ್ಕಳ – 75.54% ರಷ್ಟು ಮತದಾನವಾಗಿದೆ. ಬೆಳ್ತಂಗಡಿ 73.64%, ಮಂಗಳೂರು-69.5%, ಮಂಗಳೂರು ಉತ್ತರ-67.23%, ಮಂಗಳೂರು ದಕ್ಷಿಣ 59.31%, ಮೂಡುಬಿದಿರೆ-70.47%, ಬಂಟ್ವಾಳ-74.71% , ಸುಳ್ಯ 62.5% ಪುತ್ತೂರು- 74.96% ರಷ್ಟು ಮತದಾನವಾಗಿದೆ










