Author: main-admin

ಉಳ್ಳಾಲ: ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಲ್ತಾಫ್ ಕುಂಪಲ ಎಂಬವರನ್ನು ಜೀವ ಬೆದರಿಕೆಯೊಡ್ಡಿ ನಾಮಪತ್ರ ವಾಪಸ್ ಪಡೆದಿರುವ ಘಟನೆಗೆ ಸಂಬಂಧಿಸಿ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಿಬ್ಬರು ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಪುರಸಭೆಯ ಕಾಂಗ್ರೆಸ್ ಬೆಂಬಲಿತ ಮಾಜಿ ಕೌನ್ಸಿಲರುಗಳಾದ ಮುಸ್ತಾಫ ಯಾನೆ ಖಬುರು ಮುಸ್ತಾಫ, ಉಸ್ಮಾನ್ ಕಲ್ಲಾಪು , ರಿಯಾಝ್ ಸೇರಿದಂತೆ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಎ.21 ರಂದು ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಧಿಕೃತ ಅಭ್ಯರ್ಥಿಯಾಗಿ ಎ ಮತ್ತು ಬಿ ಫಾರಂ ಪಡೆದು ಉಳ್ಳಾಲ ನಗರಸಭೆ ಚುನಾವಣಾ ಕಚೇರಿಯಲ್ಲಿ ಅಲ್ತಾಫ್ ಕುಂಪಲ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಪರಿಶೀಲನೆಯಲ್ಲಿ ಸಿಂಧುತ್ವಗೊಂಡ ಘೋಷಣೆ ನಂತರ ಅದೇ ದಿನ ಸಂಜೆ 3 ಗಂಟೆಗೆ ಮೇಲಂಗಡಿ ದರ್ಗಾ ಹಿಂಭಾಗದಲ್ಲಿ ಮುಸ್ತಾಫ, ಉಸ್ಮಾನ್, ರಿಯಾಝ್ ಹಾಗೂ ಇತರರು ಸೇರಿ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಅವರನ್ನು ಬೆದರಿಕೆ ಹಾಕಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ, ಬೆದರಿಕೆ ಒಡ್ಡಿ,…

Read More

ಪುತ್ತೂರು: ನವ ವಿವಾಹಿತೆಯೋರ್ವರು ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಈಕೆ ತವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಏ.25ರಂದು ನಡೆದಿದೆ. ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಗುಡ್ಡಕೋಡಿ ಬಾಳಪ್ಪ ಪೂಜಾರಿಯವರ ಪುತ್ರಿ ಹರ್ಷಿತಾ(28ವ.) ಮೃತಪಟ್ಟವರು. ಹರ್ಷಿತಾ ಮತ್ತು ಬಲ್ನಾಡು ದಿ.ನಾರಾಯಣ ಪೂಜಾರಿಯವರ ಮಗ, ಕೆಮ್ಮಿಂಜೆ ದೇವಳದ ಮ್ಯಾನೇಜರ್ ಆಗಿರುವ ಪ್ರಶಾಂತ್ ಅವರ ವಿವಾಹವು ಇದೇ ಫೆ.10 ರಂದು ನಡೆದಿತ್ತು. ಮದುವೆಯಾದ ಬಳಿಕ ಗಂಡನ ಮನೆಯಲ್ಲಿ ವಾಸ್ತವ್ಯವಿದ್ದ ಹರ್ಷಿತಾರವರು ಏ.23ರಂದು ತನ್ನ ತಾಯಿ ಮನೆಯ ನೆರೆಮನೆಯಲ್ಲಿ ನಡೆದ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಲೆಂದು ಪತಿ ಮನೆಯಿಂದ ತಾಯಿ ಮನೆಗೆ ಹೋಗಿದ್ದರು. ಅಲ್ಲಿ ಏ.24 ರಂದು ರಾತ್ರಿ ಬಚ್ಚಲು ಮನೆಗೆ ಹೋಗಿ ಬಂದ ಆಕೆ, ತಾನು ಕ್ರಿಮಿನಾಶಕ ವಿಷ ಪದಾರ್ಥವನ್ನು ಸೇವಿಸಿರುವುದಾಗಿ ತಾಯಿಯೊಂದಿಗೆ ಹೇಳಿ ಅಸ್ವಸ್ಥಗೊಂಡಿದ್ದರು. ಬಳಿಕ ತಾಯಿ, ಮಗ ಮತ್ತು ಸಂಬಂಧಿ ಅಣ್ಣ ಚೆನ್ನಪ್ಪ ಅಂಚನ್‌ರವರು ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಗೆ…

Read More

ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆ ಇದೇ ಏ.29 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ಮಂಗಳೂರು ನಗರದಲ್ಲಿ ರೋಡ್‌ ಷೋ ನಡೆಸಲಿದ್ದಾರೆ ಏ.29 ರಂದು ಸಂಜೆ 4 ಗಂಟೆಗೆ  ಪುರಭವನದ ಕ್ಲಾಕ್‌ ಟವರ್‌ನಿಂದ ಪ್ರಾರಂಭವಾಗಿ ಹಂಪನಕಟ್ಟೆ ವೃತ್ತದ ಮೂಲಕ ಕೆ.ಎಸ್‌ ರಾವ್‌ ರಸ್ತೆಯಲ್ಲಿ ಸಾಗಿ ಮಂಜೇಶ್ವರ ಗೋವಿಂದ ಪೈ ವೃತ್ತದ ವರೆಗೆ ಬೃಹತ್‌ ರೋಡ್‌ ಷೋ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

Read More

ಉಳ್ಳಾಲ: ಸೋಮೇಶ್ವರ ಸಮುದ್ರ ತೀರದ ರುದ್ರಪಾದೆಯಲ್ಲಿ ಉಳ್ಳಾಲದ ಧರ್ಮನಗರ ನಿವಾಸಿ ಯುವಕ ನಾಪತ್ತೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ. ಜಿನ್ನಪ್ಪ ಪೂಜಾರಿ ಎಂಬವರ ಪುತ್ರ ವಸಂತ್ ಅಮೀನ್ (49) ನಾಪತ್ತೆಯಾದವರು.ಕಾರು ಡೀಲರ್ ಆಗಿರುವ ಅಮೀನ್ ಅವರ ಚಪ್ಪಲಿ, ಮೊಬೈಲ್ ಮತ್ತು ಕಾರು ಸಮುದ್ರದ ಬಳಿ ಪತ್ತೆಯಾಗಿದೆ.ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಉಳ್ಳಾಲದ ಬಸ್ತಿಪಡ್ಪು ನಿವಾಸಿ ಆಗಿರುವ ಇವರು ಉಳ್ಳಾಲದ ಧರ್ಮನಗರದಲ್ಲಿ ಕೆಲ ತಿಂಗಳುಗಳ ಹಿಂದೆ ಮನೆಯನ್ನು ಕಟ್ಟಿದ್ದರು. ಇಂದು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆಂದು ಹೋದವರು ನಾಪತ್ತೆಯಾಗಿದ್ದಾರೆ. ಸ್ಥಳೀಯರು ಸೋಮೇಶ್ವರ ಸಮುದ್ರ ತೀರದಲ್ಲಿ ಕಾರು ಹಾಗೂ ರುದ್ರಪಾದೆಯಲ್ಲಿ ಪಸ್೯ ,ಚಪ್ಪಲಿ ಹಾಗೂ ಮೊಬೈಲ್ ಅನ್ನು ಪತ್ತೆಹಚ್ಚಿದ್ದಾರೆ. ಸ್ಥಳೀಯ ಈಜುಗಾರರ ಸಹಾಯದಿಂದ ಸಮುದ್ರದಲ್ಲಿ ವಸಂತ್ ಅಮೀನ್ ಅವರಿಗಾಗಿ ಹುಡುಕಾಟ ನಡೆಯುತ್ತಿದೆ.

Read More

ಫರಂಗಿಪೇಟೆ ಚೆಕ್ ಪೋಸ್ಟ್ ನಲ್ಲಿ ಚುನಾವಣಾ ತಪಾಸಣೆ ನಡೆಯುತ್ತಿದ್ದ ಸಂದರ್ಭ ವಾಹನ ತಪಾಸಣೆ ವೇಳೆ ದಾಖಲೆ ರಹಿತ ನಗದು ಸಾಗಾಟ ಪ್ರಕರಣ ಪತ್ತೆಯಾಗಿದೆ. ಒಟ್ಟು 3 ಲಕ್ಷ ರೂ ವಾಹನದಲ್ಲಿದ್ದು, ಈ ಕುರಿತು ವಾಹನದವರಲ್ಲಿ ದಾಖಲೆ ಕೇಳಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಈ ಹಿನ್ನೆಲೆಯಲ್ಲಿ ತಪಾಸಣಾಧಿಕಾರಿಗಳು ನಗದನ್ನು ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದ ವೇಳೆ ನಗದು ಕಂಡುಬಂದಿದ್ದು, ಕೂಡಲೇ ಅದನ್ನು ಚುನಾವಣಾ ಸಂಬಂಧಿ ಪರಿಶೀಲನಾ ಸಮಿತಿಗೆ ಹಸ್ತಾಂತರಿಸಿದ್ದು, ತನಿಖೆ ನಡೆಯುತ್ತಿದೆ

Read More

ಉಡುಪಿ: ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023 ಕ್ಕೆ ಸಂಬಂಧಿಸಿದಂತೆ ಮೇ 10 ರಂದು ಮತದಾನ ನಡೆಯುವ ಹಿನ್ನೆಲೆ, ಮೇ 8 ರಂದು ಸಂಜೆ 6 ಗಂಟೆಯಿಂದ ಮೇ 10 ರಂದು ಮತದಾನ ಮುಕ್ತಾಯವಾಗುವವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಮತಗಟ್ಟೆಗಳ ಸುತ್ತಲೂ 200 ಮೀ. ಆವರಣವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸಿ, ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರಡಿ ಈ ಕೆಳಗಿನಂತೆ ಷರತ್ತುಗಳನ್ನು ವಿಧಿಸಿ, ಪ್ರತಿಬಂಧಕಾಜ್ಞೆಯನ್ನು ಜಾರಿ ಮಾಡಿ, ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿರುತ್ತಾರೆ. ಜಿಲ್ಲಾ ವ್ಯಾಪ್ತಿಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಲಾಗಿದೆ. ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ದಿನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಮನೆ-ಮನೆ ಪ್ರಚಾರಕ್ಕೆಸಂಬಂಧಿಸಿದಂತೆ ಮನೆ-ಮನೆಗೆ ಭೇಟಿ ನೀಡುವುದನ್ನು ನಿರ್ಬಂಧಿಸಿರುವುದಿಲ್ಲ. ಶಸ್ತ್ರ, ಬಡಿಗೆ ಬರ್ಚಿ, ಖಡ್ಗ, ಗದೆ, ಬಂದೂಕು, ಊರಿ, ಲಾಠಿ, ದೊಣ್ಣೆ, ಚಾಕು ಹಾಗೂ ದೇಹಕ್ಕೆ ಅಪಾಯವನ್ನು ಉಂಟು ಮಾಡುವ ಯಾವುದೇ…

Read More

ಮುಂಬಯಿ : ಮುಂಬಯಿಯ ಹೋಟೆಲ್‌ ಉದ್ಯಮಿಯೊಬ್ಬರು ಅಪಹರಣಕ್ಕೊಳಗಾದ ಘಟನೆ ಸೋಮವಾರ ಸಂಭವಿಸಿದೆ. ಅಪಹರಣಕ್ಕೊಳಗಾದ ಹೋಟೆಲ್‌ ಉದ್ಯಮಿ ಕರಾವಳಿ ಅನೂಪ್‌ ಶೆಟ್ಟಿ ಎನ್ನಲಾಗಿದೆ. ಸೋಮವಾರ ಮಧ್ಯಾಹ್ನದ ವೇಳೆ ಅಂಧೇರಿ ಪೂರ್ವದ ಚಕಾಲದ ಸರ್‌ ಚಥುರ್‌ದಾಸ್‌ ವಾಸಂಜಿ ರಸ್ತೆಯಲ್ಲಿರುವ ಅವರ ವೀರ ರೆಸಿಡೆನ್ಸಿ ಹೋಟೆಲ್‌ಗೆ ಬಂದ ನಾಲ್ವರು ಏರ್‌ಗನ್‌ ತೋರಿಸಿ ಅನೂಪ್‌ ಶೆಟ್ಟಿಯವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು ಅನೂಪ್‌ ಶೆಟ್ಟಿಯವರನ್ನು ಮಂಗಳವಾರ ಮಧ್ಯಾಹ್ನ ಪಾರು ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.ಹಣಕಾಸಿನ ವ್ಯವಹಾರದ ತಗಾದೆಯ ಹಿನ್ನೆಲೆಯಲ್ಲಿ ಈ ಅಪಹರಣವಾಗಿದೆ. ಕೆಲ ಸಮಯ ಹೋಟೆಲ್‌ ವ್ಯವಹಾರದಲ್ಲಿ ಪಾಲುದಾರನಾಗಿದ್ದ ವ್ಯಕ್ತಿಯೇ ಹಣಕಾಸಿನ ವಿಚಾರದಲ್ಲಿ ತಗಾದೆ ಬಂದು ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಅಪಹರಣಕಾರರಲ್ಲಿ ಇಬ್ಬರು ವೈಟರ್‌ಗಳ ಸೋಗು ಹಾಕಿ ಬೆಳಗ್ಗೆ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿ ಅನೂಪ್‌ ಶೆಟ್ಟಿಯವರ ಮಾಹಿತಿಯನ್ನು ರವಾನಿಸಿದ್ದರು. ಈ ಮೂವರಲ್ಲದೆ ಕಾರು ಚಾಲಕನನ್ನು ಪೊಲೀಸರು ಪಾಡ್ಗಾ ಎಂಬಲ್ಲಿಂದ ಬಂಧಿಸಿ ಅನೂಪ್‌ ಶೆಟ್ಟಿಯವರನ್ನು ಪಾರು ಮಾಡಿದ್ದಾರೆ. ಅಪಹರಿಸುವ ಮೊದಲು ಆರೋಪಿಗಳು ಗಾಳಿಯಲ್ಲಿ ಒಂದು ಸುತ್ತು…

Read More

ನವದೆಹಲಿ:ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರ ನಿವಾಸಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮಂಗಳವಾರ ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದ 16 ಸ್ಥಳಗಳಲ್ಲಿ ಶೋಧ ನಡೆಸಿದೆ‌. ಉತ್ತರ ಪ್ರದೇಶ, ಬಿಹಾರ, ಪಂಜಾಬ್ ಮತ್ತು ಗೋವಾದಲ್ಲಿ ಪಿಎಫ್‌ಐ ಜೊತೆಗಿನ‌ ನಂಟು ಹೊಂದಿರುವವರು ಮತ್ತು ಶಂಕಿತ ಸ್ಥಳಗಳಲ್ಲಿ ಈ ದಾಳಿಗಳನ್ನು ನಡೆಸಲಾಗಿದೆ. ಎನ್‌ಐಎ ಶೋಧಿಸಿದ ಸ್ಥಳಗಳಲ್ಲಿ ಬಿಹಾರದಲ್ಲಿ 12, ಉತ್ತರ ಪ್ರದೇಶದಲ್ಲಿ ಎರಡು ಮತ್ತು ಪಂಜಾಬ್‌ನ ಲೂಧಿಯಾನ ಮತ್ತು ಗೋವಾದಲ್ಲಿ ತಲಾ ಒಂದು ಸ್ಥಳಗಳು ಸೇರಿವೆ ಎಂದು ಮೂಲಗಳು ತಿಳಿಸಿದೆ. ರಾಜ್ಯ ಪೊಲೀಸ್ ಪಡೆಗಳೊಂದಿಗೆ ನಿಕಟ ಸಮನ್ವಯದಲ್ಲಿ NIA ತಂಡಗಳು ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿದೆ. ಗೃಹ ವ್ಯವಹಾರಗಳ ಸಚಿವಾಲಯವು PFI ಅನ್ನು ನಿಷೇಧಿಸಿರುವುದರಿಂದ ಮತ್ತು ಅದರ ಉನ್ನತ ನಾಯಕರನ್ನು ಜೈಲಿಗೆ ಹಾಕಿರುವುದರಿಂದ, ಸಂಘಟನೆಯು ತನ್ನ ಕಾರ್ಯಕರ್ತರನ್ನು ಮರುಸಂಘಟಿಸಲು ಮತ್ತು ಬಲಪಡಿಸಲು ಶ್ರಮಿಸುತ್ತಿದೆ ಎಂದು ಆರೋಪಿಸಲಾಗಿದೆ. ಸೆಪ್ಟೆಂಬರ್ 2022 ರಲ್ಲಿ ‘ಕಾನೂನುಬಾಹಿರ ಸಂಘ’ ಎಂದು ಪಿಎಫ್…

Read More

ನವದೆಹಲಿ: ಅಪರೇಷನ್ ಕಾವೇರಿ ಅಡಿಯಲ್ಲಿ ಸುಡಾನ್’ನಿಂದ ಭಾರತೀಯರ ಮೊದಲ ಬ್ಯಾಚ್ ತವರು ದೇಶಕ್ಕೆ ಹೊರಟಿದೆ. ಸುಮಾರು 278 ಪ್ರಯಾಣಿಕರನ್ನ ಹೊತ್ತ ಭಾರತೀಯ ನೌಕಾಪಡೆಯ ಗಸ್ತು ನೌಕೆ ಐಎನ್ಎಸ್ ಸುಮೇಧಾ ಹಡಗು ಸುಡಾನ್ ದೇಶದ ಪೋರ್ಟ್ ನಿಂದ ಜೆಡ್ಡಾ ಪ್ರಯಾಣಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ತಿಳಿಸಿದ್ದಾರೆ. ಐಎನ್‌ಎಸ್ ಸುಮೇಧಾದಲ್ಲಿದ್ದ ಭಾರತೀಯರ ಫೋಟೋಗಳನ್ನ ಟ್ವೀಟ್ ಮಾಡಿದ್ದು, ತಮ್ಮ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಿದ್ದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಹೇಳಲು ಕೆಲವರು ರಾಷ್ಟ್ರಧ್ವಜವನ್ನ ಹಿಡಿದಿದ್ದರು ಎಂದು ಟ್ವೀಟ್ ಮಾಡಿದ್ದಾರೆ. ಸೇನೆ ಮತ್ತು ಅರೆಸೇನಾ ಗುಂಪಿನ ನಡುವೆ ಭೀಕರ ಕಾಳಗ ನಡೆಯುತ್ತಿರುವ ಸುಡಾನ್‌ನಿಂದ ಸ್ಥಳಾಂತರಿಸಿದ ಭಾರತೀಯರ ಗುಂಪಿನಲ್ಲಿ ಮಕ್ಕಳೂ ಸೇರಿದ್ದಾರೆ. ಸುಡಾನ್‌ನಲ್ಲಿ ಸಿಲುಕಿರುವ ನಮ್ಮ ನಾಗರಿಕರನ್ನು ಮರಳಿ ಕರೆತರಲು ‘ಆಪರೇಷನ್ ಕಾವೇರಿ’ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸುಮಾರು 500 ಭಾರತೀಯರು ಸುಡಾನ್ ಬಂದರನ್ನು ತಲುಪಿದ್ದಾರೆ. ಅವರನ್ನು ಕರೆತರಲು ನಮ್ಮ ಹಡಗುಗಳು ಮತ್ತು ವಿಮಾನಗಳು ಸಜ್ಜಾಗಿವೆ.

Read More

ಕೇರಳ(Kerala) ದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express)​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ, ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಲಿದೆ. ಮೊದಲ ಹಂತದ ಅಡಿಯಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಸಂಪೂರ್ಣ ಹಳಿಯನ್ನು ಗಂಟೆಗೆ 110 ಕಿ.ಮೀ ವೇಗಕ್ಕೆ ಪರಿವರ್ತಿಸಲು 381 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ. ತಿರುವುಗಳನ್ನು ನೇರಗೊಳಿಸುವುದು ಮತ್ತು ಇತರ ಅಗತ್ಯ ಹೊಂದಾಣಿಕೆಗಳನ್ನು ಒಳಗೊಂಡಿರುವ ಎರಡನೇ ಹಂತವು ಪೂರ್ಣಗೊಳ್ಳಲು ಎರಡರಿಂದ ಮೂರೂವರೆ ವರ್ಷ ಬೇಕಾಗುತ್ತದೆ. ಬಳಿಕ ಈ ಟ್ರ್ಯಾಕ್‌ನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ. ಏಪ್ರಿಲ್ 17 ರಂದು ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು, ತಿರುವನಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 5:10ಕ್ಕೆ ಆರಂಭವಾದ ಪ್ರಾಯೋಗಿಕ ರೈಲು ಓಡಾಟ ಮಧ್ಯಾಹ್ನ 12:30ಕ್ಕೆ ಕಣ್ಣೂರು ತಲುಪಿತ್ತು. ಆರಂಭಿಕ ಹಂತದಲ್ಲಿ, ವಂದೇ ಭಾರತ್ ಗಂಟೆಗೆ…

Read More