ನವದೆಹಲಿ: ದೆಹಲಿಯ ದ್ವಾರಕಾ ಜಿಲ್ಲೆಯ ಬಿಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಟಿಯಾಲ ರಸ್ತೆಯಲ್ಲಿರುವ ಅವರ ಕಚೇರಿಯಲ್ಲಿ ಸ್ಥಳೀಯ ಬಿಜೆಪಿ ಮುಖಂಡ ಸುರೇಂದ್ರ ಮಟಿಯಾಲ ಅವರನ್ನು ಶುಕ್ರವಾರ ಸಂಜೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ. ನಿನ್ನೆ ರಾತ್ರಿ 7:30 ರ ಸುಮಾರಿಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕಚೇರಿಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದರು ಎಂದು ಮೃತ ರಾಮ್ ಸಿಂಗ್ ಅವರ ಸೋದರ ಸಂಬಂಧಿ ತಿಳಿಸಿದ್ದಾರೆ. ‘ಶುಕ್ರವಾರ ರಾತ್ರಿ 7:30 ರ ಸುಮಾರಿಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಕೈಯಲ್ಲಿ ಹೆಲ್ಮೆಟ್‌ನೊಂದಿಗೆ ಕಚೇರಿಗೆ ಪ್ರವೇಶಿಸಿದರು ಮತ್ತು ಇದ್ದಕ್ಕಿದ್ದಂತೆ ಅವರು ಮನಬಂದಂತೆ ಗುಂಡು ಹಾರಿಸಲು ಪ್ರಾರಂಭಿಸಿದರು. ದುಷ್ಕರ್ಮಿಗಳು ಹಲವಾರು ಸುತ್ತು ಗುಂಡು ಹಾರಿಸಿದರು. ಅದರಲ್ಲಿ 4-5 ಗುಂಡುಗಳು ಸುರೇಂದ್ರಗೆ ತಗುಲಿದವು. ಕೃತ್ಯ ಎಸಗಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ’ ಎಂದು ಅವರು ತಿಳಿಸಿದರು. ಕಚೇರಿಯೊಳಗಿದ್ದ ಜನರು ಸುರೇಂದ್ರನನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಅಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
Author: main-admin
ಮಂಗಳೂರು: ಅಕ್ರಮ ಸಾಗಾಟದ ಬರೋಬ್ಬರಿ 67ಲಕ್ಷ ರೂ. ದಾಖಲೆ ರಹಿತ ಹಣವನ್ನು ಕಾಸರಗೋಡಿನ ಕಲ್ಲೂರಾವಿಯಲ್ಲಿ ವಶಪಡಿಸಿಕೊಂಡ ಕಾಸರಗೋಡು ಡಿವೈಎಸ್‌ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡವು ಓರ್ವನನ್ನು ಬಂಧಿಸಿದೆ. ಪುಂಜಾವಿ ನಿವಾಸಿ ಹ್ಯಾರಿಸ್ (39) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಡಿವೈಎಸ್‌ಪಿ ನೇತೃತ್ವದಲ್ಲಿ ಶುಕ್ರವಾರ ಬೆಳಗ್ಗೆ ಕಲ್ಲೂರಾವಿಯಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿತ್ತು. ಈ ವೇಳೆ ಹ್ಯಾರಿಸ್ ಸ್ಕೂಟರನ್ನು ತಡೆದು ತಪಾಸಣೆ ನಡೆಸಿದಾಗ ಬರೋಬ್ಬರಿ 67 ಲಕ್ಷ ರೂ. ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ
ಸುಳ್ಯ: ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಬಳಿ ಕೆ.ಎಸ್.ಆರ್ ಟಿ. ಸಿ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಆರು ಮಂದಿ ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಮಡಿಕೇರಿ ಕಡೆಯಿಂದ ಬಂದ ಶಿಪ್ಟ್ ಕಾರು ಸಂಪಾಜೆ ಪೆಟ್ರೋಲ್ ಪಂಪ್ ಪೆಟ್ರೋಲ್ ಹಾಕಿ ರಸ್ತೆಗೆ ಇಳಿಯುತ್ತಿದ್ದಂತೆ ಸುಳ್ಯದಿಂದ ಮಡಿಕೇರಿಗೆ ಹೋಗುತ್ತಿದ್ದ ಕೆಸ್ ಆರ್ ಟಿ ಸಿ ಬಸ್ ಡಿಕ್ಕಿಯಾಗಿದೆ.ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ಹೇಳಲಾಗಿದ್ದು, ಗಾಯಗೊಂಡವರನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾರೆ.ಮೂವರು ಮಕ್ಕಳು, ಇಬ್ಬರು ಮಹಿಳೆಯರು, ಓರ್ವ ಗಂಡಸು ಮೃತಪಟ್ಟಿದ್ದಾರೆ. ಮೃತದೇಹ ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಹಾಗೂ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮೃತರ ಗುರುತು ಪತ್ತೆಯಾಗಿಲ್ಲ.ಕಾರಿನಲ್ಲಿ ಒಟ್ಟು 8 ಮಂದಿ ಇದ್ದರು ಎಂದು ಹೇಳಲಾಗಿದೆ, ಒಬ್ಬ ಗಂಡಸು ಮತ್ತು…
ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಹಾಗೂ ಚುನಾವಣಾ ಅಧಿಕಾರಿಗಳು ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸುತ್ತಿದ್ದು, ಗುರುವಾರ ಅಧಿಕಾರಿಗಳು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತು ಜಿಲ್ಲಾಧ್ಯಕ್ಷ ಸುದರ್ಶನ ಅವರ ಕಾರನ್ನು ತಡೆದು ತಪಾಸಣೆ ನಡೆಸಿದ್ದಾರೆ. ಅಧಿಕಾರಿ ಜಯಕೀರ್ತಿ ಹೆಚ್.ಬಿ. ಅವರಿದ್ದ ತಂಡವು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಿರುವ ಇನೋವಾ ಕಾರು ಹಾಗೂ ಐದು ಪೊಲೀಸ್ ಭದ್ರತಾ ವಾಹನದೊಂದಿಗೆ ಬೆಂಗಳೂರಿನಿಂದ ಮಂಗಳೂರಿಗೆ ಚಾರ್ಮಾಡಿ ಘಾಟ್ ರಸ್ತೆ ಮೂಲಕ ಬರುತ್ತಿದ್ದಾಗ ಚಾರ್ಮಾಡಿ ಚೆಕ್ ಪೋಸ್ಟ್ ನಲ್ಲಿ ತಡೆದು ನಿಲ್ಲಿಸಿ ಕಾರು ಪರಿಶೀಲನೆ ನಡೆಸಿ ನಂತರ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಾರ್ಮಾಡಿ ಚೆಕ್ ಪೋಸ್ಟ್ ಮೂಲಕ ಚಿಕ್ಕಮಗಳೂರು ಜಿಲ್ಲೆಯ ವಾಹನಗಳು ದ.ಕ ಜಿಲ್ಲೆಗೆ ಪ್ರವೇಶಿಸುತ್ತಿದ್ದು, ಅಂತರ್ ಜಿಲ್ಲಾ ಚೆಕ್ ಪೋಸ್ಟ್ ಆಗಿರುವ ಇಲ್ಲಿ ಕಟ್ಟು ನಿಟ್ಟಿನ ವಾಹನ ತಪಾಸಣೆ ನಡೆಸಲಾಗುತ್ತಿದೆ.
ವೇಣೂರು: ವೇಣೂರು ಜುಗುಲ್ ಬಾರ್ ಎದುರು ಹಲ್ಲೆ ನಡೆಸಿದ ಪ್ರಕರಣದಡಿ ಗೋಳಿಯಂಗಡಿ ಪ್ರಸಾದ್ ಅಲಿಯಾಸ್ ಬಾಡು ಹಾಗೂ ಗರ್ಡಾಡಿಯ ಕರುಣಾಕರ ಶೆಟ್ಟಿ ಎಂಬವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇವರಿಬ್ಬರು ಆರೋಪಿಗಳು ಕುಡಿದ ಮತ್ತಿನಲ್ಲಿ ಮೂಡುಕೋಡಿ ನಿವಾಸಿ ನಾರ್ಣಪ್ಪ ಪೂಜಾರಿ (70) ಎಂಬವರಿಗೆ ಹಲ್ಲೆ ನಡೆಸಿದ್ದು, ತಲೆಯ ಬಾಗಕ್ಕೆ ಗಾಯಗೊಂಡಿದ್ದ ಅವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಬಿಎಸ್‌ಪಿ ನಾಯಕ ರಾಜ್‌ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅತೀಕ್ ಅಹ್ಮದ್‌ನ ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನ ಯುಪಿ ಪೊಲೀಸರು ಅಲ್ಲಿನ ಝಾನ್ಸಿಯಲ್ಲಿ ಎನ್‌ಕೌಂಟರ್ ಮಾಡಿದ್ದಾರೆ. ಅಸಾದ್ ಅಹ್ಮದ್ ಹಾಗೂ ಗುಲಾಮ್ ಅನ್ನೊ ಆರೋಪಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಈವರೆಗೆ ಒಟ್ಟು 4 ಆರೋಪಿಗಳನ್ನ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದಂತಾಗಿದೆ. ಇತ್ತ ಇದೇ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನ ಪ್ರಯಾಗ್‌ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅತೀಕ್ ಅಹ್ಮದ್‌ಗೆ 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಇನ್ನು ಅತೀಕ್ ಕೋರ್ಟ್‌ನಲ್ಲಿದ್ದಾಗಲೇ ಮಗನ ಎನ್‌ಕೌಂಟರ್ ಸುದ್ದಿ ತಿಳಿದುಬಂದಿದೆ ಎನ್ನಲಾಗಿದೆ.
ಉಳ್ಳಾಲ:ಸಿಎಂ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಗೆ ಟೆಂಪೋ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿರುವ ಘಟನೆ ಆಡಂಕುದ್ರು ಬಳಿ ಸಂಭವಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಳ್ಳಾಲದ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಹಿನ್ನೆಲೆ ರಾ.ಹೆ.66 ರಲ್ಲಿ ಬಂದೋಬಸ್ತ್ ನಲ್ಲಿದ್ದ ಕಂಕನಾಡಿ ಸಂಚಾರಿ ಠಾಣೆ ಪೊಲೀಸ್ ಪೇದೆ ಮಂಜುನಾಥ ಹೆಗಡೆ ಟೆಂಪೂ ಢಿಕ್ಕಿಯಾಗಿ ಗಾಯಗೊಂಡಿದ್ದಾರೆ. ಮಂಜುನಾಥ್ ಮುಖ್ಯಮಂತ್ರಿ ಭೇಟಿ ಹಿನ್ನೆಲೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಕೆಲಸ ಮಾಡುತ್ತಿದ್ದರು. ಈ ವೇಳೆ ತಲಪಾಡಿ ಕಡೆಗೆ ತೆರಳುತ್ತಿದ್ದ ಟೆಂಪೋವೊಂದು ಚಾಲಕನ ನಿಯಂತ್ರಣ ಕಳೆದು ಪೊಲೀಸ್ ಪೇದೆಗೆ ಢಿಕ್ಕಿ ಹೊಡೆದಿದೆ. ಪೇದೆಗೆ ತಲೆ ಹಾಗು ಕೈಗಳಿಗೆ ಗಾಯಗೊಂಡಿದ್ದು ಪೇದೆಯನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಉಳ್ಳಾಲ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರು 12 ಮಂದಿಯಿಂದ ಲಕ್ಷಾಂತರ ಹಣ ಪಡೆದು ವಂಚಿಸಿರುವ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚನೆ ನಡೆಸಿದ ಲೀನಾ ಲೋಬೋ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಜಿತೇಶ ಕ್ಲಿಶನ್ ಡಿ ಸೋಜಾ, ರಿಕ್ಸನ್ ಸಂತಾನಿಸ್, ಎಡ್ಲಿನ್ ಕ್ಲಿಂಟನ್ ಡಿ ಸೋಜಾ, ಗ್ಲಾನ್ಸಿಲ ಫೆರ್ನಾಂಡೀಸ್, ಜೋಸೆಫ್ ಡಿ ಸೋಜಾ, ಗ್ಲಾನೆಟ್ ಫೆರ್ನಾಂಡೀಸ್, ಸಚಿನ್ ಪಸನ್ನ, ವಿನಯ್ ಜೋಯ್ ಅಲ್ವಾರಿಸ್, ಜೀವನ್ ಕ್ಲಿಫರ್ಡ್ ಡಿ ಸೋಜಾ, ನಾಗೇಂದ್ರ ಗಣಪತಿ, ಅವಿಶ್ ಡಿ ಸೋಜ, ಜೋಯ್ ಸನ್ ಲೂವಿಸ್ ಎಂಬವರಿಂದ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ತಿಳಿಸಿದ ಲೀನಾ ಅವರಿಂದ ಫೆ.2 ರಿಂದ ಮಾ.12 ರವರೆಗೆ ಹಂತಹಂತವಾಗಿ ಗೂಗಲ್ ಪೇ ಮೂಲಕ ಒಟ್ಟು ರೂ.2.82.000/- ಹಣವನ್ನು ಪಡೆದು, ನಂತರ ಉದ್ಯೋಗವನ್ನು ಕೊಡಿಸದೆ ವಂಚಿಸಿದ್ದಾರೆ. ದೂರುದಾರರು ಹಣವನ್ನು ವಾಪಸ್ಸು ಕೇಳಿದರೂ ಹಿಂತಿರುಗಿಸದ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಉಡುಪಿ : ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು,ಬೈಂದೂರಿನ ಅಗ್ನಿಶಾಮಕ ಸಿಬ್ಬಂದಿಗಳಿಂದ ಕೂಡಲೇ ಬೆಂಕಿ ನಂದಿಸಲಾಗಿದೆ.ಕ್ಷಣಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಬೈಂದೂರಿನ ಅರೆಶಿರೂರು ಹೆಲಿಪ್ಯಾಡ್ ಬಳಿ ಬೆಂಕಿ ಸಿಎಂ ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದ ಬೆಂಕಿ ಕಾಣಿಸಿಕೊಂಡಿದ್ದು,ಭಯಭೀತರಾಗಿದ್ದಾರೆ. ಅರೆಶಿರೂರು ಹೆಲಿಪ್ಯಾಡ್‌ನಲ್ಲಿ ಸಿಎಂ ಇಳಿದು ಕೊಲ್ಲೂರು ಮೂಕಾಂಬಿಕಾ ದೇಗುಲದ ದರ್ಶನಕ್ಕೆ ಎಸ್ಕಾರ್ಟ್ ಮೂಲಕ ತೆರಳಿದ್ದಾರ ಎಂದು ತಿಳಿದು ಬಂದಿದೆ.
ಸುಳ್ಯ: ಆಹಾರ ಅರಸುತ್ತ ಬಂದ ಕಾಡಾನೆಗಳು ತೋಟಕ್ಕೆ ನುಗ್ಗಿ ಅಲ್ಲಿದ್ದ ಕೆರೆಗೆ ಬಿದ್ದ ಘಟನೆ ಸುಳ್ಯದ ಅಜ್ಜಾವರ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ಸನತ್ ರೈ ಎಂಬವರ ತೋಟದಲ್ಲಿದ್ದ ಕೆರೆಗೆ ಎರಡು ಮರಿಯಾನೆ ಮತ್ತು ಎರಡು ದೊಡ್ಡ ಆನೆ ಬಿದ್ದಿವೆ. ಆಹಾರ ಅರಸುತ್ತಾ ಬಂದಿದ್ದ ಕಾಡಾನೆಗಳು ತೋಟದಲ್ಲಿ ಬಾಳೆಗಿಡ- ಅಡಿಕೆ ಮರ ಹುಡಿ ಮಾಡಿದ್ದು, ಬಳಿಕ ಕೆರೆಗೆ ಬಿದ್ದಿವೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳ ಆಗಮಿಸಿ ಕಾರ್ಯಾಚರಣೆಗೆ ಸಿದ್ದತೆ ನಡೆಸಿದ್ದಾರೆ. ಜೆಸಿಬಿ ಬಳಸಿ ಕೆರೆಯನ್ನು ಅಗಲ ಮಾಡಿ ಕಾಡಾನೆಗಳನ್ನು ಹೊರತೆಗೆಯಲು ಪ್ರಯತ್ನ ಮಾಡುತ್ತಿದ್ದಾರೆ. ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ಸುಳ್ಯ ಅಜ್ಜಾವರ, ಮಂಡೆಕೋಲು ಮುಂತಾದ ಭಾಗದಲ್ಲಿ ಕಾಡಾನೆ ಹಾವಳಿ ಇದೆ.










