ಮಂಗಳೂರು: ನಗರದಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ತನ್ನ ಪತಿಯನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ ಎಂದು ತಿಳಿಯಲಾಗಿದೆ. ಘಟನೆ ಹಿನ್ನೆಲೆ: ಈ ಘಟನೆ 2016ರಲ್ಲಿ ನಡೆದಿತ್ತು. ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಪಾವೂರು ನಿವಾಸಿ ಇಸ್ಮಾಯಿಲ್ (59) ಕೊಲೆಯಾದವರು. ಅವರ ಪತ್ನಿ ನೆಬಿಸಾ(40), ಆಕೆಯ ಪ್ರಿಯಕರ ಕುತ್ತಾರುಪದವಿನ ಜಮಾಲ್ ಅಹಮ್ಮದ್ (38), ಉಳ್ಳಾಲದ ಅಬ್ದುಲ್ ಮುನಾಫ್ ಆಲಿಯಾಸ್ ಮುನ್ನ (41), ಉಳ್ಳಾಲದ ಅಬ್ದುಲ್ ರೆಹಮಾನ್ (36) ಮತ್ತು ಬೋಳಿಯಾರ್‌ನ ಶಬೀರ್ (31) ಶಿಕ್ಷೆಗೊಳಗಾದವರು ಎಂದು ತಿಳಿದು ಬಂದಿದೆ. ಇಸ್ಮಾಯಿಲ್ ಅವರು ನೆಬಿಸಾಳನ್ನು ಎರಡನೇ ವಿವಾಹವಾಗಿದ್ದು ಅವರು ನಾಲ್ವರು ಮಕ್ಕಳನ್ನು ಹೊಂದಿದ್ದರು. ನೆಬಿಸಾ ಮತ್ತು ಜಮಾಲ್‌ನಿಗೆ ಅನೈತಿಕ ಸಂಬಂಧವಿತ್ತು. ಇದು ಇಸ್ಮಾಯಿಲ್‌ಗೆ ಗೊತ್ತಾಗಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇದೇ ಕಾರಣಕ್ಕೆ ಆಗಾಗ್ಗೆ ಪತಿ -ಪತ್ನಿಯರ ನಡುವೆ ಗಲಾಟೆ ನಡೆಯುತ್ತಿತ್ತು. ಇದೇ ಹಿನ್ನೆಲೆಯಲ್ಲಿ ನೆಬಿಸಾ ಸುಪಾರಿ ನೀಡಿ…
Author: main-admin
ರಾಜ್ಯ ಸರ್ಕಾರ ರಾತ್ರೋರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದೆ. 25 ಮಂದಿ ಅಧಿಕಾರಿಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ವರ್ಗಾವಣೆಯಾಗಿ ನೂತನ ಎಸ್ಪಿಯಾಗಿ ಯತೀಶ್.ಎನ್ ನೇಮಕವಾಗಿದ್ದಾರೆ. ಮಂಡ್ಯ ಎಸ್ಪಿಯಾಗಿದ್ದ ಯತೀಶ್ ದಕ್ಷಿಣ ಕನ್ನಡಕ್ಕೆ ನೂತನ ಎಸ್ಪಿಯಾಗಿ ನೇಮಕವಾಗಿದ್ದು, ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್ಪಿಯಾಗಿ ರಿಷ್ಯಂತ್ ವರ್ಗಾವಣೆಯಾಗಿದ್ದಾರೆ. 25 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ. ಲಾಬೂರಾಮ್ : ಐಜಿಪಿ ಕೇಂದ್ರ ವಲಯಬಿ. ಆರ್ . ರವಿಕಾಂತೇಗೌಡ : ಐಜಿಪಿ ಹೆಡ್ ಕ್ವಾಟ್ರರ್ಸ್ -1 ಬೆಂಗಳೂರು (ಡಿಜಿ ಕಛೇರಿ)ಡಾ ಕೆ ತ್ಯಾಗರಾಜನ್ : ಐಜಿಪಿ, ಐಎಸ್ ಡಿ.ಎನ್ ಶಶಿಕುಮಾರ್ : ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.ಬಿ ರಮೇಶ್ : ಡಿಐಜಿ ಪೂರ್ವವಲಯ, ದಾವಣಗೆರೆ..ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತರು, ಮೈಸೂರು ನಗರರೇಣುಕಾ ಸುಕುಮಾರ್ : ಐಜಿಪಿ ( ಡಿಜಿ ಕಛೇರಿ).ಸಿಕೆ ಬಾಬಾ: ಎಸ್ ಪಿ, ಬೆಂಗಳೂರು ಗ್ರಾಮಾಂತರ.ಎನ್ ವಿಷ್ಣುವರ್ಧನ್…
ಅಪ್ರಾಪ್ತೆಯೊಬ್ಬಳು ಕಾಲೇಜಿನಲ್ಲೇ ಮಗುವಿಗೆ ಜನ್ಮ ನೀಡಿರುವ ಘಟನೆ ಕೋಲಾರ ಹೊರವಲಯದಲ್ಲಿರುವ ಖಾಸಗಿ ಕಾಲೇಜಿನಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿ ಕಾಲೇಜು ಶೌಚಾಲಯದಲ್ಲಿ ಗಂಡು ಮಗುವಿಗೆ ಅಪ್ರಾಪ್ತೆ ಜನ್ಮ ನೀಡಿದ್ದಾಳೆ. ಈ ಸಂಭಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಮಹಿಳಾ ಪೊಲೀಸರು ಬಾಲಕಿ ಸ್ಥಿತಿಗೆ ಕಾರಣನಾದ ಭೂಪನಿಗಾಗಿ ಹುಡುಕಾಟ ನಡೆಸಿದ್ದಾರೆ. ಏನಿದು ಘಟನೆ?ಪೊಲೀಸರಿಗೆ ಸಿಕ್ಕ ಪ್ರಾಥಮಿಕ ಮಾಹಿತಿ ಪ್ರಕಾರ, ಬಾಲಕಿಯು ಯುವಕನೊಂದಿಗೆ ಪ್ರೀತಿಯಲ್ಲಿದ್ದಳು. ಆದ್ರೆ ಆತ ಅದೇ ಕಾಲೇಜಿನ ಯುವಕನಾ ಅಥವಾ ಹೊರಗಿನವನಾ ಎಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಬಾಲಕಿ ಸ್ಥಿತಿ ಕಾರಣನಾದ ಯುವಕನಿಗಾಗಿ ಹುಟುಕಾಟ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. ಮಂಗಳವಾರ ಶೌಚಾಲಯಕ್ಕೆ ತೆರಳಿದಾಗ ಬಾಲಕಿ ಅಲ್ಲಿಯೇ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಬಾಲಕಿಯನ್ನ ಆರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಇಷ್ಟು ದಿನ ಯಾರಿಗೂ ಗೊತ್ತಿರಲಿಲ್ಲವೇ? ಅಥವಾ ಸ್ನೇಹಿತರಿಗೆ ಗೊತ್ತಿದ್ದೂ ವಿಚಾರ ಮುಚ್ಚಿಟ್ಟಿದ್ದರಾ? ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳ್ತಂಗಡಿ: ಮಹಿಳೆಯೋರ್ವಳು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಧರ್ಮಸ್ಥಳದ ಜೋಡುಸ್ಥಾನದಲ್ಲಿನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಜೋಡುಸ್ಥಾನ ನಿತ್ಯನೂತನ ಭಜನ ಮಂದಿರ ಬಳಿಯ ನಿವಾಸಿ ರಕ್ಷಿತಾ ಜೈನ್ (26) ಎಂದು ಗುರುತಿಸಲಾಗಿದೆ. ರಕ್ಷಿತಾ ಜೈನ್ ರವರು ತನ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ರಕ್ಷಿತಾ ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ. ಮೃತರು ತಂದೆ ವೀರಚಂದ್ರ ಜೈನ್, ತಾಯಿ ಅರುಣಾ, ಪತಿ ಸಂತೋಷ್ ಜೈನ್ ಹಾಗೂ 2 ವರ್ಷದ ಹೆಣ್ಣು ಮಗುವನ್ನು ಅಗಲಿರುತ್ತಾರೆ.
ಉಳ್ಳಾಲ: ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸವಾರ ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪಾವೂರು ಮಲಾರು ಅಕ್ಷರನಗರ ನಿವಾಸಿ ವಿಶ್ವನಾಥ್ ಆಚಾರ್ಯ ಎಂಬವರ ಪುತ್ರ ಗಣೇಶ್ ಆಚಾರ್ಯ (27) ಮೃತ ದುರ್ದೈವಿ.ಗಣೇಶ್ ಆಚಾರ್ಯ ಅವರು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಸಹಕರಿಸಿದ ಹಿತೈಷಿಗಳ, ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.ಜೂ.28 ರಂದು ಗಣೇಶ ಅವರು ಪಾವೂರು ಹರೇಕಳ ಕಡೆಯಿಂದ ಕೊಣಾಜೆ ಕಡೆಗೆ ತೆರಳುವ ವೇಳೆ ಬೆಳಿಗ್ಗೆ 11.50ರ ಸುಮಾರಿಗೆ ಹರೇಕಳ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿತ್ತು. ಟಿಪ್ಪರ್ ವಾಹನ ಚಾಲಕನ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆ ನಡೆಸಿ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಹಿಂಬದಿಯಲ್ಲಿದ್ದ ಸ್ಕೂಟರ್ ಢಿಕ್ಕಿ ಹೊಡೆದು ಸ್ಕೂಟರ್ ಸಮೇತ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ಇನ್ನು ಟಿಪ್ಪರ್ ಲಾರಿ ಚಾಲಕ ಮಹಮ್ಮದ್ ಹನೀಫ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.ಗಾಯಾಳುವನ್ನು ತಕ್ಷಣ ಟಿಪ್ಪರ್ ಚಾಲಕ ಸೇರಿದಂತೆ ಸ್ಥಳೀಯರು…
ಮಂಗಳೂರು ನಗರದ ಜೈಲಿನಲ್ಲಿ ಎರಡು ಗುಂಪುಗಳ ಮಧ್ಯೆ ಮಾರಾಮಾರಿ ನಡೆದಿದೆ. ಅದರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಯಲಾಗಿದೆ. ಉಳ್ಳಾಲ ನಿವಾಸಿ ಮುಹಮ್ಮದ್ ಸಮೀರ್ ಅಲಿಯಾಸ್ ಕಡಪರ ಸಮೀರ್(33) ಹಾಗೂ ಬೋಳಿಯಾರ್ ನಿವಾಸಿ ಮುಹಮ್ಮದ್ ಮನ್ಸೂರ್ (30)ಗೆ ಗಾಯಗೊಂಡವರು. ಇವರಿಬ್ಬರು ಉಳ್ಳಾಲ ಠಾಣಾ ವ್ಯಾಪ್ತಿಯ ಕೇಸ್ ನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ. ರೌಡಿ ಶೀಟರ್‌ಗಳಾಗಿರೋ ಟೋಪಿ ನೌಫಲ್ ಮತ್ತು ಗ್ಯಾಂಗ್ ನಿಂದ ಇಬ್ಬರ ಮೇಲೆ ದಾಳಿ ನಡೆದಿದೆ. ಅಡುಗೆ ಮನೆಯಲ್ಲಿದ್ದ ಕೆಲವು ಹರಿತವಾದ ವಸ್ತುಗಳಿಂದ ಹಲ್ಲೆ ನಡೆಸಲಾಗಿದೆ ಎನ್ನಲಾಗಿದ್ದು, ತಲೆ, ಭುಜ ಮತ್ತು ದೇಹದ ಇತರ ಭಾಗಗಳಿಗೆ ಗಾಯಗಳಾಗಿರುವ ಮಾಹಿತಿ ಸಿಕ್ಕಿದೆ. ಸದ್ಯ ಇಬ್ಬರೂ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆರೋಪಿಗಳು ಮತ್ತು ಹಲ್ಲೆಗೊಳಗಾದ ಇಬ್ಬರೂ ಅನೇಕ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ. ಅಲ್ಲದೇ ರೌಡಿ ಶೀಟರ್ ಗಳಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಘಟನೆ ಜೈಲಿನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾರಾಗೃಹದ ಅಧಿಕಾರಿಗಳ ದೂರಿನ ಮೇರೆಗೆ ಮುಫದ್ ರಿಫಾತ್ (28), ಮುಹಮ್ಮದ್ ರಿಜ್ವಾನ್ (34),…
ಬಂಟ್ವಾಳ : ನಿರ್ಮಾಣ ಹಂತದಲ್ಲಿರುವ ರುದ್ರಭೂಮಿಯಿಂದ ಬೆಲೆಬಾಳುವ ಸಿಲಿಕಾನ್ ಛೇಂಬರ್ ಅನ್ನು ಹಾಗೂ ಇತರ ಸಾಮಗ್ರಿಗಳನ್ನು ಕಳವುಗೈದ ಘಟನೆ ಬಂಟ್ವಾಳ ತಾಲೂಕು ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ನಡೆದಿದೆ. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಬಡಗಕಜೆಕಾರು ಗ್ರಾಮದ ಮಾಡಪಲ್ಕೆ ಎಂಬಲ್ಲಿ ಸಾರ್ವಜನಿಕ ಸ್ಮಶಾನದ ಕಾಮಗಾರಿಗಾಗಿ, ಸಿಲಿಕಾನ್ ಛೇಂಬರ್ ನ್ನು 08.03.2024 ರಂದು ಅಳವಡಿಸಲಾಗಿದ್ದು, 01.07.2024 ರಂದು ಬೆಳಿಗ್ಗೆ ಕಟ್ಟಡ ಕಾಮಗಾರಿಯ ಕಂಟ್ರಾಕ್ಟರ್ ನೋಡಿದಾಗ, ಸದ್ರಿ ಸಿಲಿಕಾನ್ ಛೇಂಬರ್‌ನ ಬಿಡಿ ಭಾಗ ಮತ್ತು ಕಾಮಗಾರಿ ಸಾಮಾಗ್ರಿಗಳು ಕಳವಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ಬಂದ ಮೇರೆಗೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಆಡಳಿತ ಮಂಡಳಿಯವರು ಹೋಗಿ ಪರಿಶೀಲಿಸಿದ್ದು, ಕಳ್ಳತನ ನಡೆದಿರುವುದು ದೃಢಪಟ್ಟಿರುತ್ತದೆ. ಕಳವಾದ ಸೊತ್ತಿನ ಅಂದಾಜು ಮೌಲ್ಯ ರೂ 70,000/- ಆಗಬಹುದು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಬಂಟ್ವಾಳ: ಹೊಳೆ ಬದಿಯಲ್ಲಿ ಚಿರತೆ ಯನ್ನು ಹೋಲುವ ಪ್ರಾಣಿ ಯೊಂದು ಮೊಸಳೆಯನ್ನು ಹಿಡಿಯುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದು ಬಂಟ್ವಾಳದ್ದು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ. ವೀಡಿಯೋದಲ್ಲಿ ಮೊಸಳೆಯನ್ನು ಹಿಡಿಯುವ ಪ್ರಾಣಿಯನ್ನು ಸೂಕ್ಷ್ಮ ವಾಗಿ ಗಮನಿಸುವಾಗ ಅದರ ಚರ್ಮವು ಚಿರತೆಗಿಂತ ಸಂಪೂರ್ಣ ಭಿನ್ನವಾಗಿದ್ದು, ಅದು ದಕ್ಷಿಣ ಅಮೆರಿಕ ದಲ್ಲಿ ಕಂಡುಬರುವ ಜಾಗ್ವಾರ್ ಪ್ರಾಣಿಯನ್ನು ಹೋಲುತ್ತಿದೆ. ಅವು ನದಿ ಬದಿಯಲ್ಲಿ ಮೊಸಳೆಗಳನ್ನೇ ಗುರಿ ಮಾಡಿ ಬೇಟೆಯಾಡುತ್ತವೆ. ಹೀಗಾಗಿ ವೀಡಿಯೋದಲ್ಲಿ ಕಂಡುಬಂದಿರುವ ದೃಶ್ಯ ಭಾರತದ್ದೇ ಅಲ್ಲ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿದೆ. ಕೆಲವು ದಿನಗಳಿಂದ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಬಂಟ್ವಾಳದ ನದಿಯಲ್ಲಿ ಕಂಡುಬಂದಿರುವ ದೃಶ್ಯ. ಆದ್ದರಿಂದ ನದಿ ದಡಕ್ಕೆ ಮೀನು ಹಿಡಿಯಲು ಹೋಗುವವರು ಜಾಗರೂಕರಾಗಿರಬೇಕು ಎಂಬ ಸಂದೇಶಗಳು ಸಾಮಾಜಿಕ ಮಾಧ್ಯಮ ಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಈ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು: ಭಾರೀ ಮಳೆಯಿಂದಾಗಿ ವಿಮಾನ ನಿಲ್ದಾಣದ ರನ್‌ವೇಯಿಂದ ಹರಿದು ಬಂದ ನೀರು ಏಳು ಮನೆಗಳಿಗೆ ಹಾನಿ ಉಂಟು ಮಾಡಿದ ಹಿನ್ನೆಲೆಯಲ್ಲಿ ಕರಂಬಾರ ಸ್ಥಳೀಯರು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು ಸ್ಪಂದಿಸದ ಕಾರಣ ಬೇಸರಗೊಂಡ ಸ್ಥಳೀಯರು ವಿಮಾನ ನಿಲ್ದಾಣದೊಳಗೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯಪ್ರವೇಶಿಸಿ, ಮಾರ್ಗವನ್ನು ತೆರವುಗೊಳಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.ಮಂಗಳೂರು ಉತ್ತರ ಶಾಸಕ ಡಾ.ಭರತ್ ವೈ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ನಿವಾಸಿಗಳ ಅಹವಾಲು ಆಲಿಸಿದರು.ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ಸ್ಥಳೀಯರ ಆಗ್ರಹಿಸಿದರು.
ಹಾಸನದ ಎಸ್ ಪಿ ಕಚೇರಿ ಆವರಣದಲ್ಲೇ ಪೊಲೀಸ್ ಕಾನ್ಸ್ ಟೇಬಲ್ ವೊಬ್ಬರು ಪತ್ನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಹಾಸನದ ಎಸ್ ಪಿ ಕಚೇರಿ ಎದುರಲ್ಲೇ ಪತ್ನಿಗೆ ನಗರದ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಲೋಕನಾಥ್ ಚಾಕುವಿನಿಂದ ಇರಿದಿದ್ದು, ಇದಿಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸದ್ಯ ಪೊಲೀಸರು ಕಾನ್ಸ್ ಟೇಬಲ್ ಲೋಕನಾಥ್ ನನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡ ಪತ್ನಿ ಮಮತಾರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಮಮತಾ ಹಾಗೂ ಲೋಕನಾಥ್ ನಡುವೆ ಜಗಳ ನಡೆಯುತ್ತಿತ್ತು. ಹೀಗಾಗಿ ಇಂದು ಎಸ್ ಪಿ ಕಚೇರಿಗೆ ದೂರು ನೀಡಲು ಬಂದ ಪತ್ನಿ ಮಮತಾಗೆ ಲೋಕನಾಥ್ ಚಾಕುವಿನಿಂದ ಇರಿದಿದ್ದ