Facebook Twitter Instagram
    Monday, July 27
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ, ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು: ಕಾನ್ಸಸ್ಟೇಬಲ್ ಅಳಲು
    ಇತ್ತೀಚಿನ ಸುದ್ದಿ

    ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ, ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು: ಕಾನ್ಸಸ್ಟೇಬಲ್ ಅಳಲು

    March 4, 2025
    Share

    ವಿಜಯಪುರ : “ನನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ರಜೆ ಸಿಗಲಿಲ್ಲ, ಕಡೆಗೂ ‌ನನ್ನ ಮಗ ಉಳಿಯಲಿಲ್ಲ. ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು. ನನಗೆ ಬಹಳ ನೋವಾಗಿದೆ” ಈ ರೀತಿಯಾಗಿ ವಿಜಯಪುರ ಜಿಲ್ಲಾ ಪೊಲೀಸ್ ಸಿಬ್ಬಂದಿಗಳ ವಾಟ್ಸಪ್​ ಗ್ರೂಪ್​ನಲ್ಲಿ ಗಾಂಧಿ ಚೌಕ್​ ಪೊಲೀಸ್ ಠಾಣೆಯ ಪೊಲೀಸ್​ ಪೇದೆ ಎ. ಎಸ್ ಬಂಡುಗೊಳ ಸಂದೇಶ ಕಳುಹಿಸಿದ್ದಾರೆ.

    ಕಾನ್ಸಸ್ಟೇಬಲ್ ಎಎಸ್ ಬಂಡುಗೋಳ ಅವರ ನವಜಾತ ಶಿಶು ಅನಾರೋಗ್ಯದ ಕಾರಣ ಐಸಿಯುನಲ್ಲಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಗು‌ ಮೃತಪಟ್ಟಿದೆ. ಮಗು ಮೃತಪಟ್ಟ ಬಳಿಕ ಎಎಸ್ ಬಂಡುಗೊಳ ಅವರು ಐಸಿಯುನಲ್ಲಿನ ಮಗುವಿನ ಫೋಟೋ ತೆಗೆದು ಪೊಲೀಸ್ ಸಿಬ್ಬಂದಿಗಳ ಗ್ರೂಪ್​ನಲ್ಲಿ ಈ ರೀತಿಯಾಗಿ ಬರೆದು ಹಾಕಿದ್ದಾರೆ. ಈ‌ ಘಟನೆಯನ್ನು ಜೊಹೇದ್ ಕಿಂಗ್ ಎಂಬ ಹೆಸರಿನ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಸ್ಟ್​ ಮಾಡಿ, ಡಿಜಿಪಿ, ಗೃಹ ಸಚಿವ ಜಿ‌. ಪರಮೇಶ್ವರ್​ ಹಾಗೂ ಟಿವಿ9ಗೆ ಟ್ಯಾಗ್ ಮಾಡಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಮೌಖಿಕವಾಗಿ ಹಾಗೂ ಲಿಖಿತವಾಗಿ ಗಾಂಧಿಚೌಕ್ ಪೊಲೀಸ್ ಠಾಣಾಧಿಕಾರಿಗಳ ಬಳಿ‌‌ ರಜೆ ಕೇಳಿಲ್ಲ. ಕಾನ್ಸಸ್ಟೇಬಲ್ ಎ ಎಸ್ ಬಂಡುಗೋಳ ಎರಡು ದಿನ ಕರ್ತವ್ಯಕ್ಕೆ ಹಾಜರಾಗಿಲ್ಲ. ಎ ಎಸ್ ಬಂಡುಗೋಳ‌ ಪತ್ನಿಗೆ ಇದು ಮೂರನೇ ಹೆರಿಗೆ ಎಂದು ತಿಳಿದು‌ಬಂದಿದೆ. ಇಲಾಖಾ‌ ಸಿಬ್ಬಂದಿಗಳ ಗ್ರೂಪ್​ನಲ್ಲಿ ಪೋಸ್ಟ್ ಹಾಕಿದ್ದಾನೆ. ಈ ಘಟನೆ ಕುರಿತು ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ತಿಳಿಸಿದರು.

    Post Views: 231

    Related Posts

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026

    ಸಂತ ಜೋಸೆಫರ ವಿಶ್ವವಿದ್ಯಾಲಯ: ‘ಓಪನ್ ಡೇ 2026’ (Open Day-2026), ಜುಲೈ 27, ಸೋಮವಾರ

    July 26, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಅಕ್ಷಯ್ ಕಲ್ಲೇಗ ಕೊಲೆ ಪ್ರಕರಣ- ಎರಡನೇ ಆರೋಪಿಗೆ ಷರತ್ತುಬದ್ಧ ಜಾಮೀನು

    July 26, 2026

    ಬಂಟ್ವಾಳ: ಶಾಲಾ ಬಸ್ ದುರಂತ ಪ್ರಕರಣ-ಶ್ರೀರಾಮ ವಿದ್ಯಾಕೇಂದ್ರ ವಿರುದ್ಧ FIR

    July 26, 2026

    ಸಂತ ಜೋಸೆಫರ ವಿಶ್ವವಿದ್ಯಾಲಯ: ‘ಓಪನ್ ಡೇ 2026’ (Open Day-2026), ಜುಲೈ 27, ಸೋಮವಾರ

    July 26, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.