ಮಂಗಳೂರು: ರಾಜ್ಯದ ಹಲವೆಡೆ ವಿವಿಧೆಡೆ ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮ ಗಂಟು ಕಾಯಿಲೆ ವೈರಾಣುವನ್ನು ನಿಯಂತ್ರಿಸಲು ಲಸಿಕೆ ಅಭಿಯಾನದ ಭಾಗವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 20,000 ಲಸಿಕೆ ಹಂಚಿಕೆಯಾಗಿದೆ. ಬೆಂಗಳೂರಿನಿಂದ ಸೋಮವಾರ ಸರಬರಾಜು ಆಗಲಿದ್ದು, ಮಂಗಳವಾರದಿಂದ ವಿತರಣೆ ನಡೆಯಲಿದೆ. ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗ ಕಾಣಿಸಿಕೊಂಡ 5 ಕಿ.ಮೀ. ಸುತ್ತಳತೆಯಲ್ಲಿ ಆರೋಗ್ಯವಂತ ಜಾನುವಾರುಗಳಿಗೆ ಲಸಿಕೆ ಹಾಕಬೇಕು ಹೀಗಾಗಿ ಮೊದಲ ’ಶಂಕಿತ’ ಚರ್ಮಗಂಟು ರೋಗ ಕಾಣಿಸಿಕೊಂಡ ಬಂಟ್ವಾಳ ತಾಲೂಕಿನ ಬಿಳಿಯೂರು ಸುತ್ತಲಿನ ಸುಮಾರು 5 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತು ಕೆಲವೊಂದು ಗೋ ಶಾಲೆಗಳಲ್ಲಿ ಮೊದಲನೇ ಹಂತದಲ್ಲಿ ಲಸಿಕೆ ಹಂಚಿಕೆ ನಡೆಯಲಿದೆ. ಇದಾದ ಕೆಲವೇ ದಿನಗಳಲ್ಲಿ ಮತ್ತಷ್ಟು ಡೋಸ್ ಲಸಿಕೆ ಜಿಲ್ಲೆಗೆ ಸರಬರಾಜಾಗುವ ಸಾಧ್ಯತೆ ಇದೆ.ಕ್ಯಾಪ್ರಿಪಾಕ್ಸ್’ ಎನ್ನುವ ವೈರಾಣುವಿನಿಂದ ಹರಡುವ ಈ ರೋಗ, ಆಫ್ರಿಕಾ ದೇಶದಲ್ಲಿ 1929ರಲ್ಲಿ ಮೊದಲು ಕಾಣಿಸಿ ಕೊಂಡಿತು. ಭಾರತದಲ್ಲಿ 2019ರಲ್ಲಿ ಒಡಿಶಾದಲ್ಲಿ ಮೊದಲ ಬಾರಿ ಪತ್ತೆ ಯಾಗಿತ್ತು. ಬಾಧಿತ ಹಸುವಿನ ಹಾಲನ್ನು ಕುಡಿಯುವುದರಿಂದಲೂ ರೋಗ ಬರುವುದಿಲ್ಲ
Author: main-admin
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಮಂಗಳೂರಿನ 3 ನೇ ಹೆಚ್ಚುವರಿ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸುವ ಸಾಧ್ಯತೆ ಇದೆ. ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಸಿದ ಮಂಗಳೂರಿನ 3 ನೇ ಹೆಚ್ಚುವರಿ ನ್ಯಾಯಾಲಯ ಈಗಾಗಲೇ ವಾದ-ವಿವಾದ ಆಲಿಸಿದ್ದು, ಇಂದು ತೀರ್ಪು ಪ್ರಕಟಿಸಲಿದೆ. ಮಳಲಿ ಮಸೀದಿ ನವೀಕರಣ ಕಾಮಗಾರಿಯ ವೇಳೆ ದೇವಾಲಯ ಮಾದರಿ ರಚನೆ ಪತ್ತೆಯಾಗಿದೆ ಎನ್ನಲಾಗಿದ್ದು, ಆ ರಚನೆಯನ್ನು ಕೆಡವದಂತೆ ನಿರ್ಬಂಧ ವಿಧಿಸುವಂತೆ ಕೋರಿ ಧನಂಜಯ್ ಹಾಗೂ ಮನೋಜ್ ಕುಮಾರ್ ಸಿವಿಲ್ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು.
ಗಾಂಧಿನಗರ: ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್ ಭಾರತದಲ್ಲಿ ಓಮಿಕ್ರಾನ್ ಹೊಸ ರೂಪಾಂತರ BF.7ನ ಮೊದಲ ಪ್ರಕರಣವನ್ನು ಪತ್ತೆ ಮಾಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಗುಜರಾತ್ ಬಯೋಟೆಕ್ನಾಲಜಿ ರಿಸರ್ಚ್ ಸೆಂಟರ್‌ನ ಹಿರಿಯ ವಿಜ್ಞಾನಿ ಡಾ ಮಾಧವಿ ಜೋಶಿ ಅವರು, ಜನರು ಭಯಭೀತರಾಗಬಾರದು. ಆದರೆ ಮಾಸ್ಕ್ ಧರಿಸಲು, ಗುಂಪುಗೂಡುವುದನ್ನು ತಪ್ಪಿಸಬೇಕು ಹಾಗೂ ಹ್ಯಾಂಡ್ ಸ್ಯಾನಿಟೈಸರ್ ನೈರ್ಮಲ್ಯವನ್ನು ಅನುಸರಿಸಲು ವಿನಂತಿಸಿದ್ದಾರೆ. ಗಮನಾರ್ಹ ವಿಚಾರವೆಂದರೆ ಎರಡು ಹೊಸ ಓಮಿಕ್ರಾನ್ ಉಪ-ರೂಪಾಂತರಗಳು BF.7 ಮತ್ತು BA.5.1.7 ಇತ್ತೀಚೆಗೆ ಚೀನಾದಲ್ಲಿ ಪತ್ತೆಯಾಗಿವೆ.
ಮಣಿಪಾಲ: ನಿಷೇದಿತ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವ ಆರೋಪಿಯನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ಹೆರ್ಗ ಗ್ರಾಮದ ಶೇಷಾದ್ರಿ ನಗರದಲ್ಲಿ ಬಂಧಿಸಿದ್ದಾರೆ. ಹಿರಿಯಡ್ಕ ಬೆಲ್ಲಾರ್ ದೇವಸ್ಥಾನ ಬೆಟ್ಟು ನಿವಾಸಿ ರಾಘವೇಂದ್ರ ದೇವಾಡಿಗ (41) ಬಂಧಿತ ಆರೋಪಿಯಾಗಿದ್ದಾನೆ.ಆರೋಪಿಯಿಂದ 4.61 ಗ್ರಾಂ ತೂಕದ ಎಂಡಿಎಂಎ ಪೌಡರ್, ಸ್ಕೂಟರ್, ಮೊಬೈಲ್ ಫೋನ್, ವೇವಿಂಗ್ ಮೆಷಿನ್, 2300 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 59,545 ರೂ. ಎಂದು ಅಂದಾಜಿಸಲಾಗಿದೆ.ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರತ್ಕಲ್ ಟೋಲ್ ಗೇಟ್ ಕುರಿತು ಅಕ್ಟೋಬರ್ 18 ರಂದು ನಡೆಯಲಿರುವ ಆಂದೋಲನದಲ್ಲಿ ಭಾಗವಹಿಸಲು ಪ್ರಮುಖರು ಪ್ರಚೋದನಕಾರಿ ಕರೆ ಮತ್ತು ಹೇಳಿಕೆಗಳನ್ನು ನೀಡಿದ ಹಿನ್ನೆಲೆಯಲ್ಲಿ, ಕೆಲವು ವ್ಯಕ್ತಿಗಳಿಗೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಆಗಿರುವ ಡಿಸಿಪಿ ಮುಂದೆ 107 ಸಿಆರ್‌ಪಿಸಿ ಅಡಿಯಲ್ಲಿ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ. “ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನವನ್ನು ಗೌರವಿಸಬೇಕು ಮತ್ತು ಮಹಿಳೆಯರಿಗೆ ಹೆಚ್ಚು ಗೌರವ ನೀಡಬೇಕು. ನಾನು ಎಸಿಪಿ ಉತ್ತರ ಮಹೇಶ್ ಕುಮಾರ್ ಅವರಿಗೆ ಈ ಬಗ್ಗೆ ವಿಚಾರಣೆ ನಡೆಸಿ ವರದಿಯನ್ನು ಸಲ್ಲಿಸಲು ಕೇಳಿದ್ದೇನೆ. ನಾವು ಪ್ರತಿಯೊಂದು ಶಾಂತಿಯುತ ಪ್ರತಿಭಟನೆಗೆ ಅನುಕೂಲ ಮಾಡಿಕೊಟ್ಟಿದ್ದೇವೆ ಎಂಬುದಕ್ಕೆ ಕಮಿಷನರೇಟ್‌ನಲ್ಲಿರುವ ಪ್ರತಿಯೊಬ್ಬರೂ ಸಾಕ್ಷಿಯಾಗಿದ್ದಾರೆ ಎಂದು ಅವರು ಹೇಳಿದರು. 16 ಮಂದಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರು: ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ಮುಖ್ಯ ಪ್ರವೇಶ ದ್ವಾರದಲ್ಲಿ ವಕೀಲರುಗಳು ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿ ಕೇವಲ ನ್ಯಾಯಧೀಶರಿಗಷ್ಟೇ ಪ್ರವೇಶ ಎಂಬ ಹೊಸ ನಿಯಮ ಜಾರಿಗೊಂಡಿದೆ. ಪರಿಣಾಮ ವಕೀಲರುಗಳು, ಸಾರ್ವಜನಿಕ ವಲಯದಲ್ಲಿ ತೀವ್ರ ವ್ಯಕ್ತವಾಗಿದೆ. ಜಿಲ್ಲಾ ನ್ಯಾಯಾಲಯ ಕಟ್ಟಡವು ಸರಕಾರಿ ಕಾರ್ಯಕ್ಕಾಗಿ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಹೊಂದಿರುವ ಕಟ್ಟಡವಾಗಿದೆ. ಆದರೆ ನೂತನವಾಗಿ ಜಾರಿಯಾಗಿರುವ ನಿಯಮದಿಂದ ದ.ಕ.ಜಿಲ್ಲಾ ನ್ಯಾಯಧೀಶರು ಮಾತ್ರ ಮುಖ್ಯದ್ವಾರದಿಂದ ಪ್ರವೇಶಿಸಬಹುದು. ವಕೀಲರು ಸಹಿತ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ ವಿಧಿಸಿರುವುದು ತೀವ್ರ ಅಸಮಾಧಾನವನ್ನು ಹುಟ್ಟು ಹಾಕಿದೆ. ನ್ಯಾಯಾಂಗದ ಅಂಗವಾಗಿರುವ ನ್ಯಾಯವಾದಿಗಳಿಗೂ ಕೂಡ ಪ್ರವೇಶ ನಿರ್ಬಂದಿಸಿರುವ ಜಿಲ್ಲಾ ನ್ಯಾಯಾಧೀಶ ರವೀಂದ್ರ ಎಂ. ಜೋಶಿಯವರ ಕ್ರಮ ತೀವ್ರ ಟೀಕೆಗೆ ಒಳಗಾಗಿದೆ. ತಕ್ಷಣ ಈ ನಾಮಫಲಕವನ್ನು ತೆರವು ಗೊಳಿಸುವಂತೆ ಈಗಾಗಲೇ ವಕೀಲರ ಸಂಘ ಒತ್ತಾಯಿಸಿದೆ. ಆದರೆ, ವಕೀಲರ ಸಂಘದ ಮನವಿಗೆ ಸೂಕ್ತ ಸ್ಪಂದನೆ ಈವರೆಗೆ ದೊರಕಿಲ್ಲ. ಈ ಬಗ್ಗೆ ಚರ್ಚೆ ನಡೆಸಲು ಮುಂದಿನ ವಾರ ವಕೀಲರ ಸಭೆ ಕೂಡ ಕರೆಯಲಾಗಿದೆ ಎನ್ನಲಾಗಿದೆ. ನ್ಯಾಯಾಲಯ…
ಮನೆಯಲ್ಲಿ ಕೆಲವೊಮ್ಮೆ ಒಂದೇ ತರಹದ ಸಾರು ಹಾಗೂ ಪಲ್ಯಗಳನ್ನು ಮಾಡಿದ್ದರೆ ಹೆಚ್ಚಾಗಿ ತಿನ್ನುವುದಿಲ್ಲ. ಹಾಗೆ ಕೆಲವೊಮ್ಮೆ ಮನೆಯಲ್ಲಿ ಚಪಾತಿ ಅಥವಾ ಅನ್ನದ ಜೊತೆ ತಿನ್ನಲು ಮನೆಮಂದಿಗೆಲ್ಲಾ ಸಾಕಾಗುವಷ್ಟು ಸಾರು ಹಾಗೂ ಪಲ್ಯಗಳನ್ನು ಮಾಡುವುದು ಕಷ್ಟವಾಗಿರುತ್ತದೆ. ಅಂತಹ ಸಂದರ್ಭದಲ್ಲಿ ಮನೆಯಲ್ಲಿ ಮೊಟ್ಟೆ ಇದ್ದರೆ ಸುಲಭವಾಗಿ ಹಾಗೂ ಬಹಳ ಬೇಗನೆ ಈ ರೆಸಿಪಿಯನ್ನು ಮಾಡಬಹುದಾಗಿದೆ. ಅದನ್ನು ಹೇಗೆ ತಯಾರಿಸುವುದು ಎಂಬ ವಿಧಾನವನ್ನು ತಿಳಿಯೋಣ. ಬೇಕಾಗುವ ಸಾಮಗ್ರಿ : ಮೊಟ್ಟೆಈರುಳ್ಳಿಟೊಮೊಟೊಹಸಿಮೆಣಸುಎಣ್ಣೆಎಗ್ ಮಸಾಲ ಪುಡಿ (Egg New Recipe)ತಯಾರಿಸುವ ವಿಧಾನ : ಮೊದಲಿಗೆ ಗ್ಯಾಸ್ ಆನ್ ಮಾಡಿ ಒಂದು ಬಾಣಲೆಯನ್ನು ಇಟ್ಟು ಅದಕ್ಕೆ ಎರಡು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಬೇಕು.ಎಣ್ಣೆ ಬಿಸಿಯಾದ ಮೇಲೆ ನಾಲ್ಕು ಹಸಿಮೊಟ್ಟೆಯನ್ನು ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಬೇಕು. ಚೆನ್ನಾಗಿ ಪ್ರೈಯಾದ ಮೊಟ್ಟೆ ಸಣ್ಣ ಸಣ್ಣ ಉಂಡೆ ರೂಪಕ್ಕೆ ಬರುತ್ತದೆ. ನಂತರ ಅದನ್ನು ಒಂದು ಪಾತ್ರೆಗೆ ತೆಗೆದು ಇಟ್ಟುಕೊಳ್ಳಬೇಕು. ಇನ್ನೊಂದು ಬಾಣಲೆಯಲ್ಲಿ ನಾಲ್ಕು ಟೇಬಲ್ ಸ್ಪೂನ್ ಎಣ್ಣೆಯನ್ನು ಹಾಕಿ ಅದಕ್ಕೆ ಸಣ್ಣಕ್ಕೆ ಹಚ್ಚಿ ಇಟ್ಟುಕೊಂಡ…
ಸುರತ್ಕಲ್: ಅಕ್ಟೊಬರ್ 18ರಂದು ಸುರತ್ಕಲ್ ಟೋಲ್ ಗೇಟ್ ಒಡೆದೇ ಸಿದ್ಧ ಎಂದಿರುವ ಟೋಲ್ ವಿರೋಧಿ ಹೋರಾಟ ಸಮಿತಿಯನ್ನು ಹತ್ತಿಕ್ಕಲು ಶತಾಯಗತಾಯ ಮುಂದಾಗಿರುವ ಜಿಲ್ಲಾಡಳಿತ ನಿನ್ನೆ ಮಧ್ಯರಾತ್ರಿ ನೂರಕ್ಕೂ ಅಧಿಕ ಹೋರಾಟಗಾರರ ಮನೆಗಳ ಮೇಲೆ ಮಧ್ಯರಾತ್ರಿ ಭೇಟಿ ಕೊಟ್ಟು ನೋಟಿಸ್ ನೀಡಿದೆ. ಗಲಾಟೆ ಮಾಡುವುದಿಲ್ಲ ಎಂದು 2 ಲಕ್ಷದ ಬಾಂಡ್ ಗೆ ಸಹಿ ನೀಡಬೇಕು ಎಂದು ಪೊಲೀಸರು ಒತ್ತಡ ಹೇರಿದ್ದಾರೆ ಎನ್ನಲಾಗಿದ್ದು ಸಮಿತಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರು, “ಬಿಜೆಪಿ ಎಂಎಲ್ಎ, ಎಂಪಿ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ.18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು. ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ. ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ. ನಿನ್ನೆ ಮಧ್ಯರಾತ್ರಿ ಸುರತ್ಕಲ್…
ಮಂಗಳೂರು: ಸುರತ್ಕಲ್ ಟೋಲ್ ವಿರೋಧಿ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಇಂದು ತಡರಾತ್ರಿಯಲ್ಲಿ ಪೊಲೀಸರು ಹೋರಾಟಗಾರರ ಮೇಲೆ ಮುಗಿಬಿದ್ದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ನೂರಕ್ಕೂ ಹೆಚ್ಚು ಮಂದಿ ಹೋರಾಟಗಾರರ ವಿಳಾಸ ಹಿಡಿದು ಮನೆಮನೆಗೆ ನುಗ್ಗಿ ನೊಟೀಸ್ ನೀಡತೊಡಗಿದ್ದಾರೆ. ಹೋರಾಟಗಾರರು ಎರಡು ಲಕ್ಷದ ಬಾಂಡ್ ನೊಂದಿಗೆ, ಸರ್ಕಾರಿ ಜಾಮೀನಿನೊಂದಿಗೆ ನಾಳೆ ಬೆಳಿಗ್ಗೆ ಪೊಲೀಸ್ ಕಮಿಷನರ್ ಕಚೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ. ಈ ಹೋರಾಟಕ್ಕೆ ಬಿಜೆಪಿಯೇತರ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡಿದ್ದವು. ದಿನ ಕಳೆದಂತೆ ಈ ಟೋಲ್ ವಿರೋಧಿ ಹೋರಾಟವು ಆಳುವ ಬಿಜೆಪಿ ಸರ್ಕಾರವ ಮೇಲೆ ಒತ್ತಡ ತರುತ್ತಿದ್ದಂತೆ ಹೋರಾಟವನ್ನೇ ಬಗ್ಗುಬಡಿಯುವ ಸರ್ವಾಧಿಕಾರಿ ಧೋರಣೆಯನ್ನು ಮಂಗಳೂರು ಪೊಲೀಸರು ತೋರುತ್ತಿದ್ದಾರೆ. ರಾತ್ರೋರಾತ್ರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ಮಹಿಳಾ ಹೋರಾಟಗಾರರ ಮನೆಗೂ ಮಧ್ಯರಾತ್ರಿ ತೆರಳಿ ನೋಟೀಸ್ ನೀಡಿದ್ದಾರೆ. ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೂ ಮಧ್ಯರಾತ್ರಿ ಹನ್ನೆರಡು ಗಂಟೆಯಲ್ಲಿ ಹೋಗಿರುವುದು ತಿಳಿದು ಬಂದಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಸುವ ಪೊಲೀಸರ ಈ ದಮನಕಾಂಡದ ಕುರಿತು ತೀಕ್ಷಣವಾಗಿ ಪ್ರತಿಕ್ರಿಯೆ…
ಮಂಗಳೂರು: ಬಟ್ಟೆ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದ ಬುರ್ಖಾಧಾರಿ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ಎಗರಿಸಿ ಪರಾರಿಯಾದ ಘಟನೆ ಕಾವೂರಿನ ದುರ್ಗಾ ಪ್ರಸಾದ್ ಕಟ್ಟಡದಲ್ಲಿರುವ ಸಂಧ್ಯಾ ಟೆಕ್ಸ್ ಟೈಲ್ ನಲ್ಲಿ ನಡೆದಿದೆ. ಘಟನೆ ಸಪ್ಟೆಂಬರ್ ತಿಂಗಳಲ್ಲಿ ನಡೆದಿದ್ದು ಮಹಿಳೆ ಬಟ್ಟೆ ಎಗರಿಸುವ ದೃಶ್ಯ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಕಾಣುವಂತೆ ಬಟ್ಟೆ ಖರೀದಿಸುವ ನೆಪದಲ್ಲಿ ಬುರ್ಖಾ ಧರಿಸಿಕೊಂಡು ಬಂದ ಮಹಿಳೆಯೊಬ್ಬರು ಅಂಗಡಿಯಲ್ಲಿದ್ದ ಬಟ್ಟೆಗಳನ್ನು ನೋಡುತ್ತಾರೆ ಬಳಿಕ ಅಂಗಡಿಯಲ್ಲಿದ್ದ ಸಿಬ್ಬಂದಿ ಇನ್ನೋರ್ವ ಗ್ರಾಹಕರ ಬಳಿಗೆ ಹೋದ ವೇಳೆ ಬುರ್ಖಾಧಾರಿ ಮಹಿಳೆ ಅಂಗಡಿಯಲ್ಲಿದ್ದ ಕೆಲವೊಂದು ಬಟ್ಟೆಗಳನ್ನು ತಾನು ಧರಿಸಿದ ಬಟ್ಟೆಯ ಒಳಗೆ ಬಚ್ಚಿಟ್ಟು ಸ್ಥಳದಿಂದ ಪರಾರಿಯಾಗುತ್ತಾಳೆ. ಈ ಎಲ್ಲಾ ದೃಶ್ಯಗಳು ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅಂಗಡಿ ಮಾಲೀಕ ಬಟ್ಟೆ ಕಳವಾದ ಕುರಿತು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಕೇಸು ದಾಖಲಿಸಿಕೊಂಡ ಪೊಲೀಸರು ಮಹಿಳೆಯ ಪತ್ತೆಗೆ ಬಲೆ ಬಿಸಿದ್ದಾರೆ.